ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಂಪೂರ್ಣ ಲಾಕ್ ಡೌನ್ ಅನ್ನು ಪೊಲೀಸರು ಇನ್ನಷ್ಟು ಬಿಗಿಗೊಳಿಸಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 8 ಗಂಟೆಗೆ ಬಂದ್ ಮಾಡಿಸಲಾಗಿದ್ದು, ಹೊರಗೆ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ.
https://www.suddikanaja.com/2021/05/10/tight-police-security-in-shivamogga/
ನಗರದ ಸವಳಂಗ ರಸ್ತೆಯಲ್ಲಿ ಬ್ಯಾರಿಕೆಡ್ ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಲಾಗಿದೆ. ಸಾಗರ ರಸ್ತೆಯಲ್ಲಂತೂ ತಂಡ ತಂಡವಾಗಿ ಪೊಲೀಸರು ನಿಂತಿದ್ದು, ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಕುವೆಂಪು ರಸ್ತೆ, ಜೈಲು ವೃತ್ತ, ಸಾಗರ ರಸ್ತೆ, ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ, ಬಿ.ಎಚ್.ರಸ್ತೆ ಹೀಗೆ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಜನರು ಮುಖ್ಯ ರಸ್ತೆ ಬಿಟ್ಟು ಬಡಾವಣೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹಲವೆಡೆ ಪೊಲೀಸರ 112 ವಾಹನಗಳನ್ನು ನಿಲ್ಲಿಸಲಾಗಿದೆ. ಹೀಗಾಗಿ, ಹೊರಗೆ ಬಂದರೆ ದಂಡ ಬೀಳುವುದು ಗ್ಯಾರಂಟಿ.
* ವ್ಯಾಕ್ಸಿನ್, ಮೆಡಿಕಲ್, ಆಸ್ಪತ್ರೆ ಹೆಸರಲ್ಲಿ ಓಡಾಟ, ಟ್ರಾಫಿಕ್ ಜಾಮ್ | ಇಷ್ಟೊಂದು ಬಿಗಿ ಬಂದೋಬಸ್ತ್ ಇದ್ದರೂ ಜನರ ಓಡಾಟ ಮಾತ್ರ ಹಾಗೆಯೇ ಇದೆ. ಕುವೆಂಪು ರಸ್ತೆಯಲ್ಲಂತೂ ಜನರ ಓಡಾಟ ಜೋರಾಗಿದೆ. ಅತಿಯಾದ ವಾಹನಗಳ ಸಂಚಾರದಿಂದ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಆಗಿದೆ.
https://www.suddikanaja.com/2021/05/29/one-week-complete-lockdown-in-shivamogga/