ಸುದ್ದಿ ಕಣಜ.ಕಾಂ
ಭದ್ರಾವತಿ: ಇತ್ತೀಚೆಗೆ ಕೊಲೆಗೀಡಾದ ಕರ್ತವ್ಯನಿರತ ಪೌರ ಕಾರ್ಮಿಕ ಸುನೀಲ್ ಕುಟುಂಬಕ್ಕೆ ಸಾಂತ್ವನ ನೀಡಲಾಗಿದೆ. ಮೃತನ ಪತ್ನಿಗೆ ಅನುಕಂಪದ ಹುದ್ದೆ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಹೇಳಿದರು.
READ | ಭದ್ರಾವತಿಯಲ್ಲಿ ಲಾಕ್ಡೌನ್ ಏರಿಯಾದಲ್ಲಿ ಬರಬೇಡ ಎಂದಿದ್ದಕ್ಕೆ ನಡೀತು ಕೊಲೆ
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೌರ ಕಾರ್ಮಿಕರ ಅಭಿವೃದ್ಧಿ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚೆಗೆ ಜೈಭೀಮ್ ನಗರ ನಿವಾಸಿ ಪೌರ ಕಾರ್ಮಿಕ ಸುನೀಲ್ ಎಂಬಾತನ ಕೊಲೆ ಮಾಡಲಾಗಿತ್ತು. ಈತನೊಂದಿಗಿದ್ದ ಶ್ರೀಕಂಠ ಎಂಬಾತನಿಗೆ ಗಾಯಗಳಾಗಿವೆ.
READ | ಕೋವಿಡ್ ಸಹಾಯ ಧನ ಹೇಗೆ ಪಡೆಯುವುದು, ಯಾರಿಗೆ ಲಭ್ಯ, ಅದಕ್ಕಿರುವ ಅರ್ಹತೆಗಳೇನು?
ಕೋವಿಡ್ ಹಿನ್ನೆಲೆ ಲಾಕ್ ಡೌನ್ ವಿಧಿಸಿದ್ದು, ಈ ರೀತಿ ಓಡಾಡಬೇಡಿ. ಪೊಲೀಸರು ಹಿಡಿಯುತ್ತಾರೆ ಎಂದು ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2020/12/17/7-accused-arrested-in-harige-murder-case-shivamogga/