ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಮೃತಪಡುವವರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಮಂಗಳವಾರ 10 ಜನ ಮೃತಪಟ್ಟಿದ್ದಾರೆ. ನಿನ್ನೆ (ಸೋಮವಾರ) 9 ಜನ ಅಸುನೀಗಿದ್ದರು.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 574, ಡಿಸಿಎಚ್‍ಸಿನಲ್ಲಿ 297, ಕೋವಿಡ್ ಕೇರ್ ಸೆಂಟರ್‍ನಲ್ಲಿ 1,898, ಖಾಸಗಿ ಆಸ್ಪತ್ರೆಯಲ್ಲಿ 1,191, ಹೋಮ್ ಐಸೋಲೇಷನ್ ನಲ್ಲಿ 1,432, ಟ್ರಿಯೇಜ್ ನಲ್ಲಿ 624 ಜನರಿದ್ದಾರೆ. ಪ್ರಸ್ತುತ 6,016 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.