ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಮೃತಪಡುವವರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಮಂಗಳವಾರ 10 ಜನ ಮೃತಪಟ್ಟಿದ್ದಾರೆ. ನಿನ್ನೆ (ಸೋಮವಾರ) 9 ಜನ ಅಸುನೀಗಿದ್ದರು.
ಮಂಗಳವಾರದಂದು 485 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 25 ವಿದ್ಯಾರ್ಥಿಗಳು ಮತ್ತು 8 ಜನ ಸಿಬ್ಬಂದಿ ಇದ್ದಾರೆ. 737 ಜನ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 574, ಡಿಸಿಎಚ್ಸಿನಲ್ಲಿ 297, ಕೋವಿಡ್ ಕೇರ್ ಸೆಂಟರ್ನಲ್ಲಿ 1,898, ಖಾಸಗಿ ಆಸ್ಪತ್ರೆಯಲ್ಲಿ 1,191, ಹೋಮ್ ಐಸೋಲೇಷನ್ ನಲ್ಲಿ 1,432, ಟ್ರಿಯೇಜ್ ನಲ್ಲಿ 624 ಜನರಿದ್ದಾರೆ. ಪ್ರಸ್ತುತ 6,016 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 243, ಭದ್ರಾವತಿ 42, ತೀರ್ಥಹಳ್ಳಿ 15, ಶಿಕಾರಿಪುರ 70, ಸಾಗರ 39, ಹೊಸನಗರ 33, ಸೊರಬ 25, ಬಾಹ್ಯ ಜಿಲ್ಲೆಯ 18 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.