ಶಿವಮೊಗ್ಗ, ಭದ್ರಾವತಿಯಲ್ಲಿ ಶತಕ ದಾಟಿದ ಸೋಂಕು, ತಾಲೂಕುವಾರು ವರದಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಅಧಿಕ ಸೋಂಕು ಪತ್ತೆಯಾಗಿದ್ದು,‌ ಇನ್ನುಳಿದೆಡೆ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.

READ | ಕೋವಿಡ್ ಥರ್ಡ್ ವೇವ್‍ಗೆ ಸರ್ಕಾರ ರೆಡಿ, ಮಕ್ಕಳ ರಕ್ಷಣೆಗೆ ಕೈಗೊಂಡ ಕ್ರಮಗಳೇನು, ನಾಲ್ಕೈದು ದಿನಗಳಲ್ಲಿ ದೇವಿಪ್ರಸಾದ್ ಶೆಟ್ಟಿ ವರದಿ ಸಲ್ಲಿಕೆ

489 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 24 ವಿದ್ಯಾರ್ಥಿಗಳು, 8 ಸಿಬ್ಬಂದಿ ಇದ್ದಾರೆ. 696 ಜನ ಗುಣಮುಖರಾಗಿದ್ದಾರೆ. 6 ಜನ ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 179, ಭದ್ರಾವತಿ 105, ತೀರ್ಥಹಳ್ಳಿ 19, ಶಿಕಾರಿಪುರ 46, ಸಾಗರ 47, ಹೊಸನಗರ 37, ಸೊರಬ 43, ಬಾಹ್ಯ ಜಿಲ್ಲೆಯ 13 ಪ್ರಕರಣಗಳಿವೆ.

READ | ತವರು ಕ್ಷೇತ್ರದಲ್ಲಿ ಸಿಎಂ ಯಡಿಯೂರಪ್ಪ ರೌಂಡ್ಸ್, ಎಲ್ಲೆಲ್ಲಿ ಭೇಟಿ ನೀಡಿದರು?

ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ | ಮೆಗ್ಗಾನ್ ನಲ್ಲಿ 558 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 246, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,632, ಖಾಸಗಿ ಆಸ್ಪತ್ರೆಯಲ್ಲಿ 1,021, ಹೋಮ್ ಐಸೋಲೇಷನ್‌ ನಲ್ಲಿ 1,309, ಟ್ರಿಯೇಜ್‌ ನಲ್ಲಿ 736 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,052 ಇದೆ.

error: Content is protected !!