ಉದ್ಯೋಗ ಆಧಾರಿತ ಡಿಪ್ಲೊಮಾ 2ನೇ ವರ್ಷದ ಶೈಕ್ಷಣಿಕ ಪ್ರವೇಶಕ್ಕೆ ಅರ್ಜಿ ಆಹ್ವಾನ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ) 2021-22ನೇ ಸಾಲಿನ 2ನೇ ವರ್ಷದ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಕೋರ್ಸ್‍ಗೆ ಅರ್ಜಿಯನ್ನು ಆಹ್ವಾನಿಸಿದೆ.
ಎರಡು ವರ್ಷಗಳ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ), ಎರಡು ವರ್ಷಗಳ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಕೋರ್ಸ್‌ ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥ ಆರ್.ಟಿ. ನಾಗರಳ್ಳಿ ತಿಳಿಸಿದ್ದಾರೆ.
ಪಿ.ಯು.ಸಿ (ವಿಜ್ಞಾನ) ಅಥವಾ ITI (ಫಿಟ್ಟರ್, ಟ್ಯೂನರ್ , ಮೆಕ್ಯಾನಿಸ್ಟ್, ಡ್ರಾಫ್ಟ್ಸ್ ಮ್ಯಾನ್) ಪರೀಕ್ಷೆಯಲ್ಲಿ ಹಾಜರಾದವರು ಅಥವಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2510618, 9480253024, 9141075968 ಸಂಪರ್ಕಿಸುವುದು.

error: Content is protected !!