ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣ ಇಳಿಕೆ, ತಾಲೂಕುವಾರು ಮಾಹಿತಿ ಇಲ್ಲಿದೆ.

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರಂಭದಿಂದಲೂ ಶಿವಮೊಗ್ಗ, ಭದ್ರಾವತಿಯಲ್ಲಿ ಕೊರೊನಾ ಆರ್ಭಟ ಜೋರಾಗಿತ್ತು. ಆದರೆ, ಈ ವಾರದಲ್ಲಿ ಸೋಂಕಿನ ಪ್ರಮಾಣ ನೆಲಕ್ಕಚ್ಚಿದೆ.

ಗುರುವಾರ 197 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲಿ 9 ವಿದ್ಯಾರ್ಥಿಗಳು, 1 ಕಾಲೇಜು ಸಿಬ್ಬಂದಿ ಇದ್ದಾರೆ. ಐದು ಜನ ಮೃತಪಟ್ಟಿದ್ದಾರೆ.

ತಾಲೂಕುವಾರು ವರದಿ | ಶಿವಮೊಗ್ಗ 84, ಭದ್ರಾವತಿ 40, ತೀರ್ಥಹಳ್ಳಿ 12, ಶಿಕಾರಿಪುರ 18, ಸಾಗರ 20, ಹೊಸನಗರ 13, ಸೊರಬ 5, ಬಾಹ್ಯ ಜಿಲ್ಲೆಯ 5 ಸೋಂಕಿತರಿದ್ದಾರೆ.

ಸಕ್ರಿಯ ಪ್ರಕರಣದಲ್ಲೂ ಇಳಿಕೆ | ಮಗ್ಗಾನ್‍ನಲ್ಲಿ 389, ಡಿಸಿಎಚ್‍ಸಿನಲ್ಲಿ 168, ಕೋವಿಡ್ ಕೇರ್ ಸೆಂಟರ್‍ನಲ್ಲಿ 1,003, ಖಾಸಗಿ ಆಸ್ಪತ್ರೆಯಲ್ಲಿ 604, ಹೋಮ್ ಐಸೋಲೇಷನ್‍ನಲ್ಲಿ 1,084, ಟ್ರಿಯೇಜ್‍ನಲ್ಲಿ 439 ಜನರು ಚಿಕಿತ್ಸೆ ಪಡೆಯುತ್ತಿದ್ದು, 3,687 ಸಕ್ರಿಯ ಪ್ರಕರಣಗಳಿವೆ.

error: Content is protected !!