ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಂಗಾರು ಮಳೆ ಮಲೆನಾಡಿನಾದ್ಯಂತ ಕಳೆಗಟ್ಟಿದ್ದು, ಕೆರೆ, ಝರಿ, ನದಿಗಳು ತುಂಬಿ ನಯನ ಮನೋಹರವಾಗಿ ಕಾಣುತ್ತಿವೆ.
https://www.suddikanaja.com/2021/06/13/monsoon-rain-started-in-shivamogga/
ಜೂನ್ ತಿಂಗಳಲ್ಲಿ ಜಿಲ್ಲೆಯ ಹೊಸನಗರದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದ್ದು, ಇದುವರೆಗೆ ಜೂನ್ 18ರ ವರೆಗೆ 1,329.10 ಎಂಎಂ ಮಳೆಯಾಗಿದೆ. ವಾಡಿಕೆ ಮಳೆ 680.10 ಎಂಎಂ ಇದ್ದು, ಕಳೆದ ವರ್ಷ 590.20 ಎಂಎಂ ವರ್ಷಧಾರೆಯಾಗಿತ್ತು. ಆದರೆ, ಈ ಸಲ ಇಡೀ ಜಿಲ್ಲೆಯಲ್ಲಿಯೇ ಅತ್ಯಧಿಕ ಮಳೆ ಹೊಸನಗರದಲ್ಲಿ ಸುರಿದಿದೆ.
ತಾಲೂಕುವಾರು ಮಳೆ ಪ್ರಮಾಣ | ಶಿವಮೊಗ್ಗದಲ್ಲಿ 99.20 ಎಂಎಂ, ಭದ್ರಾವತಿ 99 ಎಂಎಂ, ತೀರ್ಥಹಳ್ಳಿ 440.30 ಎಂಎಂ, ಸಾಗರ 314 ಎಂಎಂ, ಶಿಕಾರಿಪುರ 125.20 ಎಂಎಂ, ಸೊರಬ 264.10 ಎಂಎಂ ಮಳೆಯಾಗಿದೆ.
ಹೊಸನಗರ ಹೊರತುಪಡಿಸಿ ಇನ್ನುಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ ದಾಖಲಾಗಿದೆ. ಜೂನ್ 1ರಿಂದ 18ರ ವರೆಗೆ 390.67 ಎಂಎಂ ಮಳೆಯಾಗಬೇಕಿತ್ತು. ಆದರೆ, 381.61 ಎಂಎಂನಷ್ಟಾಗಿದೆ. ಆದರೆ, ಕಳೆದ ವರ್ಷ 216.95 ಎಂಎಂ ಮಳೆಯಾಗಿತ್ತು.
ಎರಡನೇ ವಾರದಿಂದ ತೀವ್ರ | ಜೂನ್ 11ರ ವರೆಗೆ ಜಿಲ್ಲೆಯಾದ್ಯಂತ ಸರಾಸರಿ 3.23 ಎಂಎಂ ಮಳೆಯಾಗಿತ್ತು. ಆದರೆ, 12ರ ಬಳಿಕ ಮಳೆ ಸುರಿಯಲಾರಂಭಿಸಿದೆ.
ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 217.20 ಎಂಎಂ ಮಳೆಯಾಗಿದ್ದು, ಭದ್ರಾ ವ್ಯಾಪ್ತಿಯಲ್ಲಿ 33.40 ಎಂಎಂ ಮಳೆಯಾಗಿದೆ.
https://www.suddikanaja.com/2021/01/06/rainfall-in-shivamogga-malenadu/