ಲೋಕಸಭೆ ಸಚಿವಾಲಯದಿಂದ ಕನ್ನಡ ಕಡೆಗಣನೆ, ಮಾತೃಭಾಷೆಯ ಅಸ್ಮಿತೆಗೆ ಮತ್ತೆ ಧಕ್ಕೆ, ಕರ್ನಾಟಕ ಸಂಸದರ ವಿರುದ್ಧ ಕನ್ನಡಿಗರು ಗರಂ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: `ವಿಶ್ವ ಲಿಪಿಗಳ ರಾಣಿ’ ಕನ್ನಡಕ್ಕೆ ಮತ್ತೆ ಕಡೆಗಣಿಸಲಾಗಿದೆ. ಆದರೆ, ಈ ಬಗ್ಗೆ ಲೋಕಸಭೆ ಕ್ಷೇತ್ರಗಳಿಂದ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದರು ಮಾತ್ರ ಸುಮ್ಮನಿದ್ದಾರೆ. ಇದು ಕನ್ನಡಿಗರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ.

lok sabhaಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು. ಆದರೆ, ಇಂತಹ ಸಮೃದ್ಧ ಭಾಷೆಯನ್ನು ಕಡೆಗಣಿಸಲಾಗಿದೆ.
ಲೋಕಸಭಾ ಸಚಿವಾಲಯ ಅಡಿಯ ‘ಪಾರ್ಲಿಮೆಂಟರಿ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿಸ್ (ಪ್ರೈಡ್) ವತಿಯಿಂದ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶ, ರಾಜ್ಯದ ಶಾಸಕರು, ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಆನ್‍ಲೈನ್ ಮೂಲಕ ಆರು ಭಾಷೆಗಳನ್ನು ಆರಂಭಿಕ (ಬಿಗಿನರ್ಸ್) ಕಲಿಕಾ ಕೋರ್ಸ್ ಆಯೋಜಿಸಿದೆ. ಅದರ ಅಡಿಯಲ್ಲಿ
ವಿದೇಶಿ ಭಾಷೆಗಳಲ್ಲಿ ಫ್ರೆಂಚ್, ಜರ್ಮನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಕಲಿಸಲಾಗುತ್ತಿದೆ.
ಕನ್ನಡಕ್ಕಿಲ್ಲ ಸ್ಥಾನಮಾನ | ಆರು ವಿದೇಶಿ ಭಾಷೆಗಳೊಂದಿಗೆ ಭಾರತದ ಭಾಷೆಗಳನ್ನು ಕಲಿಕೆಯ ಭಾಗವಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲಿ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು ಭಾಷೆಗಳನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಭಾರತದ ತಮಿಳು, ತೆಲುಗು ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಸುದೀರ್ಘ ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡವನ್ನು ಇದರಿಂದ ಕೈಬಿಡಲಾಗಿದೆ. ಕೇಂದ್ರದ ಈ ಕ್ರಮ ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

https://www.suddikanaja.com/2021/01/18/condemn-in-social-media-for-not-using-kannada-in-raf-foundation-stone/

error: Content is protected !!