
ಸುದ್ದಿ ಕಣಜ.ಕಾಂ | TALUK | Odale bekada suddi
ಭದ್ರಾವತಿ: ಮನುಷ್ಯ ಎಷ್ಟೇ ಕ್ರೂರಿಯಾಗಿರಲಿ. ಮಾಣವ ಸಂಕುಲಕ್ಕೆ ಸಂಕಷ್ಟ ಎದುರಾದಾಗ ಯಾವುದನ್ನೂ ಲೆಕ್ಕಿಸದೇ ಸಹಾಯಕ್ಕೆ ಧಾವಿಸುತ್ತಾನೆ. ಅಂತಹದ್ದೇ ಒಂದು ಘಟನೆ ಭದ್ರಾವತಿ ತಾಲೂಕಿನ ಕವಲಗುಂದಿ ಬಿಸಿಎಂ ಹಾಸ್ಟೆಲ್’ನ ಕಾಳಜಿ ಕೇಂದ್ರದಲ್ಲೂ ಬೆಳಕಿಗೆ ಬಂದಿದೆ.
‘ಓದಲೇ ಬೇಕಾದ ಸುದ್ದಿ’ ಅಂಕಣಕ್ಕೆ ಇದೇ ರೀತಿಯ ಆಸಕ್ತಿಕರವಾದ ವಿಚಾರಗಳಿದ್ದರೆ ನಮಗೆ ಕಳುಹಿಸಿಕೊಡಿ. ಅದಕ್ಕೊಂದು ಚಿತ್ರ, ಪುಟ್ಟದೊಂದು ಬರವಣಿಗೆ ಇದ್ದರೆ ಸಾಕು. ವಾಟ್ಸಾಪ್ ಮಾಡಿ | +91 94831 30291, ಇಲ್ಲವೇ ಇಮೇಲ್ ಮಾಡಿ | [email protected]
READ | ಸಂತ್ರಸ್ತರಿಗೆ ಕಳ್ಳತನದ ಕಾಟ! ಎಲ್ಲೆಲ್ಲಿ ಏನೇನು ಕಳ್ಳತನವಾಗಿದೆ?
ಭದ್ರೆಯ ಆರ್ಭಟಕ್ಕೆ ಹೊಸ ಸೇತುವೆ ಮುಳುಗಿತ್ತು. ಆಗ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಆತಂಕಕ್ಕೆ ಒಳಗಾಗಿದ್ದರು. ತಕ್ಷಣ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಜನರಿಗೆ ಆಶ್ರಯ ಕೂಡ ನೀಡಲಾಗಿದೆ. ವಿಶೇಷವೆಂದರೆ, ಮನೆಯಲ್ಲಿ ಸಾಕಿದ್ದ ಕೋಳಿ ಮತ್ತು ನಾಯಿಗಳಿಗೂ ಇಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದು. ಪ್ರಾಣಿಗಳ ಮಾಲೀಕರು ತಾವು ತಿನ್ನುವುದರಲ್ಲೇ ಸ್ವಲ್ಪ ಅವುಗಳಿಗೂ ನೀಡುತ್ತಿದ್ದಾರೆ. ಜತೆಗೆ, ಸಂತ್ರಸ್ತರು ಮನೆಯಲ್ಲಿಯೇ ಕೋಳಿಗಳನ್ನು ಬಿಟ್ಟು ಬರುವುದರಿಂದ ಅವುಗಳ ಕಳ್ಳತನದ ಭೀತಿಯೂ ಇದೆ. ಅದಕ್ಕಾಗಿ, ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಮಾಲೀಕನೊಂದಿಗೆ ನಾಯಿ, ಕೋಳಿಗಳು ಕಾಳಜಿ ಕೇಂದ್ರದಲ್ಲಿ ಸೌಖ್ಯವಾಗಿವೆ.
₹10 ಕೋಳಿ ಮರಿಗೆ KSRTC ಬಸ್ ನಲ್ಲಿ ₹50 ಟಿಕೆಟ್!, ಲಗೇಜು ದರ ನಿಯಮವೇನು ಹೇಳುತ್ತೆ?