ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ‘ಪ್ರೈಡ್’ನಲ್ಲಿ ಕನ್ನಡ ಭಾಷೆ ಸೇರಿಸದೇ ಇರುವ ತಪ್ಪನ್ನು ಸರ್ಕಾರ ತಿದ್ದುಕೊಂಡಿದೆ.

https://www.suddikanaja.com/2021/02/28/the-antiquity-of-kannada-language-in-northern-kannada/

ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಪ್ರೈಡ್) ಆನ್‍ಲೈನ್ ಮೂಲಕ ಭಾಷಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡೆ ಮಾಡಿದೆ. ಈ ಮೂಲಕ ಕನ್ನಡಿಗರ ಸಿಟ್ಟು ತಣ್ಣಗಾಗಿದೆ.
ಲೋಕಸಭಾ ಸಚಿವಾಲಯ ಅಡಿಯ ಪ್ರೈಡ್ ವತಿಯಿಂದ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶ, ರಾಜ್ಯದ ಶಾಸಕರು, ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಆನ್ ಲೈನ್ ಮೂಲಕ ಆರು ಭಾಷೆಗಳನ್ನು ಆರಂಭಿಕ (ಬಿಗಿನರ್ಸ್) ಕಲಿಕಾ ಕೋರ್ಸ್ ಆಯೋಜಿಸಿದೆ.

ಅದರ ಅಡಿಯಲ್ಲಿ ವಿದೇಶಿ ಭಾಷೆಗಳಲ್ಲಿ ಫ್ರೆಂಚ್, ಜರ್ಮನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಕಲಿಸಲಾಗುತ್ತಿದೆ. ಜತೆಗೆ, ಭಾರತದ ಭಾಷೆಗಳಾದ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು ಭಾಷೆಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಸುದೀರ್ಘ ಇತಿಹಾಸ ಹೊಂದಿರುವ ಕನ್ನಡವನ್ನು ತರಬೇತಿಯಿಂದ ಕೈಬಿಡಲಾಗಿತ್ತು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಇದನ್ನು ಖಂಡಿಸಿದ್ದವು. ಜತೆಗೆ, ಟ್ವಿಟರ್ ನಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

`ಸುದ್ದಿ ಕಣಜ’ ಬಿಗ್ ಇಂಪ್ಯಾಕ್ಟ್ | ಜೂನ್ 19ರಂದು ಕನ್ನಡ ಕಡೆಗಣನೆಯ ಬಗ್ಗೆ `ಸುದ್ದಿ ಕಣಜ.ಕಾಂ’ ಎಕ್ಸ್ ಕ್ಲೂಸಿವ್ ವರದಿ ಪ್ರಕಟಿಸಿತ್ತು. ಇದಕ್ಕೆ ಸಾಕಷ್ಟು ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಅಂತಿಮವಾಗಿ ಕನ್ನಡವನ್ನು ಸೇರ್ಪಡೆ ಮಾಡಲಾಗಿದೆ.

https://www.suddikanaja.com/2021/01/18/condemn-in-social-media-for-not-using-kannada-in-raf-foundation-stone/

error: Content is protected !!