ಸುದ್ದಿ ಕಣಜ.ಕಾಂ
ಸಾಗರ: ಜೊಗ ಜಲಪಾತಕ್ಕೆ ಸೋಮವಾರ ಇಡೀ ದಿನ ಸೇರಿ ಒಟ್ಟು 1000 ಜನ ಭೇಟಿ ನೀಡಿದ್ದು, ಅಂದಾಜು 20,000 ರೂಪಾಯಿ ಸಂಗ್ರಹವಾಗಿದೆ.
ಅನ್ ಲಾಕ್ ಆಗಿದ್ದೇ ಜೋಗದ ಸಿರಿಯನ್ನು ಸವಿಯಲು ಬೆಂಗಳೂರು, ದಾವಣಗೆರೆ ಸೇರಿದಂತೆ ನಾನಾ ಕಡೆಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ. ಮಂಗಳವಾರವೂ ಜೋಗ ಪ್ರವಾಸಿಗರು ಆಗಮಿಸಿದ್ದಾರೆ.
ಮಲೆನಾಡಿನ ಸೊಬಗು ಸವಿಗುವುದಕ್ಕಾಗಿ ಶಿವಮೊಗ್ಗಕ್ಕೆ ಬರುವ ಪ್ರವಾಸಿಗರು ಜೋಗ ಮಾತ್ರವಲ್ಲದೇ ವಿವಿಧ ತಾಣಗಳಿಗೆ ಭೇಟಿ ನೀಡುತಿದ್ದಾರೆ. ಇದರಿಂದ ನಿಧಾನವಾಗಿ ಪ್ರವಾಸಿ ತಾಣಗಳಲ್ಲಿ ಜನರ ಓಡಾಟ ಆರಂಭವಾಗಿದೆ. ಜೊತೆಗೆ, ಸಣ್ಣಪುಟ್ಟ ಉದ್ಯಮಿಗಳಿಗೂ ಅನುಕೂಲವಾಗುತ್ತಿದೆ.