ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಿಗೆ ಬಸ್ ಪ್ರಯಾಣ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ಇದೆ.
ಲಾಕ್ ಡೌನ್ ಬಳಿಕ ಬಸ್ ಸಂಚಾರ ಆರಂಭಗೊಂಡಿದ್ದು, ಡೀಸೆಲ್ ದರ 96 ರೂಪಾಯಿ ಇದ್ದು, ಬಿಡಿ ಭಾಗಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇದರಿಂದಾಗಿ, ಶೇ.20ರಷ್ಟು ದರ ಏರಿಕೆಯ ಸಾಧ್ಯತೆ ಇದೆ ಎಂದು ಮಾಲೀಕರ ಸಂಘದವರು ತಿಳಿಸಿದ್ದಾರೆ.