ಬೆಂಗಳೂರನ್ನು ಬೆಚ್ಚಿ ಬೀಳಿಸಿದ ನಿಗೂಢ ಶಬ್ದ! ವಿಪತ್ತು ನಿರ್ವಹಣಾ ಕೇಂದ್ರ ಹೇಳಿದ್ದೇನು?

 

 

ಸುದ್ದಿ‌ ಕಣಜ.ಕಾಂ
ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ ಮಧ್ಯಾಹ್ನ ಭಾರಿ ಸದ್ದೊಂದು ಕೇಳಿಸಿದೆ. ಈ ಸದ್ದಿನಿಂದ ಬೆಂಗಳೂರಿನ ಜನ ಕೆಲಹೊತ್ತು ಆತಂಕಕ್ಕೆ ಒಳಗಾಗಿದ್ದಾರೆ.

READ | ರೈಲು ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ, ಇನ್ನಷ್ಟು ಕಂಡಿಷನ್ ವಿಧಿಸಿದ ರೈಲ್ವೆ ಇಲಾಖೆ, ರೈಲು ಹತ್ತುವ ಮುನ್ನ ಇದನ್ನು ಓದಿ

ಈ ನಿಗೂಢ ಶಬ್ದ ಶುಕ್ರವಾರ ಮಧ್ಯಾಹ್ನ 12.22ರ ಸುಮಾರಿಗೆ ಕೇಳಿ ಬಂದಿದೆ. ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗಗಳ ಜನರಿಗೆ ಶಬ್ದ ಕೇಳಿಬಂದ ಅನುಭವವಾಗಿದೆ.
ಶಬ್ಧ ಕೇಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಆದರೆ, ನಗರದಲ್ಲಿ ಭೂಕಂಪವೂ ಆಗಿಲ್ಲ. ಸ್ಫೋಟವೂ ಆಗಿಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್.ಎ.ಎಲ್, ಎಂದಿನಂತೆ ವಿಮಾನ ತರಬೇತಿ ನಡೆಯುತ್ತಿದೆ. ಆದರೆ, ಬೆಂಗಳೂರಿನಾದ್ಯಂತ ಉಂಟಾದ ಶಬ್ದದ ಬಗ್ಗೆ ಪ್ರತಿಕ್ರಿಯೆ ನೀಡಲಾಗದು ಎಂದಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಇದೇ ರೀತಿಯ ನಿಗೂಢ ಶಬ್ದವೊಂದು ಬೆಂಗಳೂರಿನಲ್ಲಿ ಕೇಳಿಸಿತ್ತು. ಆಗ ಇದು‌ ಸೋನಿಕ್ ಬೂಮ್ ನಿಂದ ಉಂಟಾದ ಶಬ್ದ ಎಂದು ರಕ್ಷಣಾ ಇಲಾಖೆ ತಿಳಿಸಿತ್ತು. ಆದರೆ, ಇಂದು ನಡೆದ ಶಬ್ದದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

https://www.suddikanaja.com/2021/03/06/issuru-dange-dead/

error: Content is protected !!