ಮಗುವಿಗೆ ಬೋನ್ ಕ್ಯಾನ್ಸರ್, ಪಡಿತರಕ್ಕೆ ಹೆಸರು ಸೇರಿಸಲು ಮನವಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರು ವರ್ಷದ ಮಗು ಬೋನ್ ಕ್ಯಾನ್ಸರ್ ನಿಂದ ಬಳಲುತಿದ್ದು, ಪಾಲಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕ್ಯಾನ್ಸರ್‌ಬಾಧಿತ‌ಮಗುವಿನ ಹೆಸರನ್ನು ಬಿಪಿಎಲ್‌ ಕಾರ್ಡ್ ಗೆ ಸೇರಿಸುವಂತೆ ಜಿಲ್ಲಾಡಳಿತಕ್ಕೆ‌ ಮನವಿ ಮಾಡಲಾಯಿತು.

READ | ಜೇನು ಕೃಷಿ ಅಭಿವೃದ್ದಿಗೆ ‘ಮಧುಕ್ರಾಂತಿ’ ವೆಬ್ ಪೋರ್ಟಲ್, ನೋಂದಣಿ ಹೇಗೆ, ಇದರಿಂದ ಏನು ಪ್ರಯೋಜನ?

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಏಳು‌ ಲಕ್ಷ ರೂಪಾಯಿ‌ ಕೇಳುತಿದ್ದು,‌ ಆಯುಷ್ಮಾನ್ ಕರ್ನಾಟಕ ಯೋಜನೆ ಅಡಿ ಚಿಕಿತ್ಸೆ ಪಡೆಯುವುದಕ್ಕಾಗಿ ಮಗುವಿನ ಹೆಸರು ರೇಷನ್ ಕಾರ್ಡ್ ನಲ್ಲಿ‌‌ ಇಲ್ಲ. ಇದರಿಂದಾಗಿ,‌ಚಿಕಿತ್ಸೆ ಕೊಡಿಸಲು ಸಾಧದಯವಾಗುತ್ತಿಲ್ಲ‌ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಒತ್ತಡದಲ್ಲಿ ಮನವಿ‌ ಮಾಡಿದ್ದಾರೆ.

https://www.suddikanaja.com/2021/02/03/casual-leave-for-treatment-of-cancer-to-government-employees/

ಲೋಹಿತ್ ಎಂಬಾತನಿಗೆ ಬೋನ್ ಕ್ಯಾನ್ಸರ್ ಇದೆ.‌ ರೇಷನ್ ಕಾರ್ಡ್ ನಲ್ಲಿ ಹೆಸರು ನೋಂದಣಿಯಾದರೆ ಶಸ್ತ್ರ ಚಿಕಿತ್ಸೆಯ ಪೂರ್ಣ ಖರ್ಚು ಸರ್ಕಾರವೇ ಭರಿಸಲಿದೆ. ಆದರೆ, ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ನೋಂದಣಿ ಪ್ರಕ್ರಿಯೆ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ಪ್ರವೀಣ್ ಕುಮಾರ್, ಕುಮರೇಶ್ ಪೋಷಕಿ ಇಂದುಮತಿ ಉಪಸ್ಥಿತರಿದ್ದರು.

https://www.suddikanaja.com/2021/02/25/cm-bs-yadiyurappa-instruction-on-anonymous-letter/

 

error: Content is protected !!