ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಜೋಡಿ ಸಿಂಹಗಳ ಆಗಮನ, ಅವುಗಳ ವಯಸ್ಸೆಷ್ಟು, ಸದ್ಯ ಎಲ್ಲಿವೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ ಮತ್ತು ಸಫಾರಿಯಲ್ಲಿನ ಸಿಂಹಗಳ‌ ಕುಟುಂಬಕ್ಕೆಗಂಡು ಮತ್ತು ಹೆಣ್ಣು ಜೋಡಿ ಸಿಂಹ ಸೇರ್ಪಡೆಯಾಗಿವೆ.

https://www.suddikanaja.com/2021/04/18/adondittu-kala-movie-shooting-in-thirthahalli/

ಬನ್ನೇರುಘಟ್ಟದಲ್ಲಿದ್ದ ಏಳು ವರ್ಷ ತುಂಬಿರುವ ಸುಚಿತ್ರ ಮತ್ತು ಯಶವಂತ್ ಹೆಸರಿನ ಸಿಂಹಗಳು ಸದ್ಯ ಶಿವಮೊಗ್ಗ ಮೃಗಾಲಯದಲ್ಲಿವೆ. ಶಿವಮೊಗ್ಗಕ್ಕೆ ಇವುಗಳನ್ನು ನೀಡಲಾಗಿದ್ದು, ಬರುವ ದಿನಗಳಲ್ಲಿ ಈ ಜೋಡಿ ಪ್ರವಾಸಿಗರ ಮನಸೂರೆಗೊಳ್ಳಲಿದೆ.
ಸಿಂಹಗಳನ್ನು ಮಂಗಳವಾರ ರಾತ್ರಿ ಮೃಗಾಲಯಕ್ಕೆ ತರಲಾಗಿದ್ದು, ಸದ್ಯ ಸಫಾರಿಯಲ್ಲಿಯೇ ಅವುಗಳನ್ನು ಬಿಡಲಾಗಿದೆ. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಎನ್ ಕ್ಲೋಸರ್ ಗಳಿಗೆ ಇವುಗಳನ್ನು ಶಿಫ್ಟ್ ಮಾಡುವ ಯೋಜನೆ ಇದೆ.

ಮೃಗಾಲಯದಲ್ಲಿರುವ ಸಿಂಹಗಳೆಷ್ಟು | ಎರಡು ಸಿಂಹಗಳ‌ ಆಗಮನದೊಂದಿಗೆ ಸಿಂಹಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 12 ವರ್ಷದ ಆರ್ಯ, 5‌ವರ್ಷದ ಮಾನ್ಯ ಜೋಡಿಯಾದರೆ, ಎರಡು ವರ್ಷಗಳ‌ ಹಿಂದೆ ಬೆನ್ನೇರುಘಟ್ಟದಿಂದ ತರಲಾಗಿರುವ ಎಂಟು ವರ್ಷದ ಸುಷ್ಮಿತಾ ಮತ್ತು ಸರ್ವೇಶ್ ಮತ್ತೊಂದು ಆದರತಶ ಜೋಡಿ.‌‌ ಈಗ ಮತ್ತೊಂದು ಜೋಡಿ ಸೇರ್ಪಡೆಗೊಂಡದೆ.

ಬರುವ ದಿನಗಳಲ್ಲಿ ಇವುಗಳ ಮೂಲಕ‌ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

https://www.suddikanaja.com/2021/02/08/penalty-on-food-feeding-to-animals-in-agumbe-ghat/

error: Content is protected !!