Sakrebailu elephant camp | ಸಕ್ರೆಬೈಲಿಗೆ ಹೊಸ ಅತಿಥಿಯ ಆಗಮನ, ಕುಂತಿಗೆ 4ನೇ ಮರಿಯ ಖುಷಿ, ನಾಮಕರಣ ಹುಟ್ಟಿಸಿದ ಕೌತುಕ

Kunthi elephant

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಕ್ರೆಬೈಲು ಆನೆಬಿಡಾರ( Sakrebailu elephant camp)ದಲ್ಲಿ ಖುಷಿಯ ವಾತಾವರಣ ಮನೆ ಮಾಡಿದೆ. ಇದಕ್ಕೆ ಕಾರಣ, ಹೊಸ ಅತಿಥಿಯ ಆಗಮನ.
ಉತ್ತರ ಪ್ರದೇಶ(UP), ಮಧ್ಯಪ್ರದೇಶ(MP) ಸೇರಿದಂತೆ ಹಲವೆಡೆ ಆನೆಗಳ ಸ್ಥಳಾಂತರ ಸುದ್ದಿ ಪ್ರವಾಸಿಗರಲ್ಲಿ ಬೇಸರು ಉಂಟು ಮಾಡಿತ್ತು. ಆದರೆ, ಈಗ ಆನೆಬಿಡಾರಕ್ಕೆ ಬರುವ ಪ್ರವಾಸಿಗರಿಗೆ ಮರಿಯ ಚಿನ್ನಾಟ ಸವಿಯುವ ಅವಕಾಶವೂ ಸಿಗಲಿದೆ.

READ | ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕ, ಪ್ರಾಣದ ಹಂಗು ತೊರೆದು ರಕ್ಷಣೆ

ನಾಲ್ಕನೇ ಮರಿಗೆ ಜನ್ಮ ನೀಡಿದ ಕುಂತಿ
ಕುಂತಿ ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಸಾಕಾನೆಗಳಲ್ಲಿ ಒಂದು. ಇದನ್ನು ಹಲವು ಕಾರ್ಯಾಚರಣೆಗಳಲ್ಲೂ ಬಳಸಲಾಗುತ್ತಿದೆ. ಇದನ್ನು ಹಾಸನ ವಿಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಆಗ ಕುಂತಿಯೊಂದಿಗೆ ಒಂದು ಮರಿ ಆನೆಯೂ ಇತ್ತು. ಅದೇ ಅರ್ಜುನ.
I M Nagarajಅರ್ಜುನನಿಗೆ ಈಗ 11 ವರ್ಷವಿದ್ದು, ಕ್ಯಾಂಪಿಗೆ ಬಂದ ಬಳಿಕ ಹೇಮಾವತಿ (8) ಮತ್ತು ಧನುಷ್(4) ಎಂಬ ಆನೆಗಳ ಜನನವಾಗಿತ್ತು. ಈಗ ನಾಲ್ಕನೇ ಗಂಡು ಮರಿಯನ್ನು ಕುಂತಿ ಜನ್ಮ ನೀಡಿದ್ದಾಳೆ. ಮರಿ ಆನೆಯ ಆಗಮನ ಆನೆಬಿಡಾರದಲ್ಲಿ ಖುಷಿಗೆ ಕಾರಣವಾಗಿದೆ.
ಹೆಸರಿನ ಕೌತುಕ
ಕುಂತಿಯ ನಾಲ್ಕನೇ ಗಂಡು ಆನೆಗೆ `ಐಎಂ’ ಎಂದು ನಾಮಕರಣ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್ (IM Nagaraj) ಅವರು ಇದೇ ತಿಂಗಳು ಸೇವೆಯಿಂದ ನಿವೃತ್ತಿ ಹೊಂದಿರುತ್ತಿರುವುದರಿಂದ ಈ ಆನೆಗೆ ಐಎಂ ಎಂಬ ಹೆಸರಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

https://suddikanaja.com/2022/12/14/today-gold-and-silver-rate/

error: Content is protected !!