ಬಿಎಸ್‍ಎನ್‍ಎಲ್ 4-ಜಿ ಸೇವೆ ನೀಡುವಂತೆ ಒತ್ತಾಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಸ್.ಎನ್.ಎಲ್. ಮುಖ್ಯ ಕಚೇರಿ ಮುಂದೆ ಆಲ್ ಯೂನಿಯನ್ ಆಂಡ್ ಅಸೋಸಿಯೇಷನ್ ಆಫ್ ಬಿಎಸ್‍ಎನ್‍ಎಲ್ (ಎಯುಎಬಿ)ದಿಂದ ಬುಧವಾರ ಪ್ರತಿಭಟನೆ ಮಾಡಲಾಯಿತು.

ಬೇಡಿಕೆಗಳೇನು?
  1. ಬಿಟಿಎಸ್ ಅಪ್ ಗ್ರೇಡ್ ಮಾಡುವ ಮೂಲಕ 4 ಜಿ ಸೇವೆ ತಕ್ಷಣ ಆರಂಭಿಸಬೇಕು
  2. 5 ಜಿ ಸೇವೆ ಆರಂಭಿಸುವತ್ತ ಗಮನಹರಿಸಬೇಕು.
  3. 2021ರ ಜೂನ್ ತಿಂಗಳ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
  4. ಮಾಸಿಕ ಸರಿಯಾದ ಸಮಯಕ್ಕೆ ವೇತನ ಮಂಜೂರು ಮಾಡಬೇಕು
  5. ಬಿ.ಎಸ್.ಎನ್.ಎಲ್. ಎಲ್ಲ ಟವರ್ ಉನ್ನತೀಕರಿಸಬೇಕು. ಯಾವುದೇ ಕಾರಣಕ್ಕೂ ಇದಕ್ಕೆ ಆರ್ಥಿಕ ಕಾರಣ ನೀಡಬಾರದು.
  6. ಉನ್ನತೀಕರಣಕ್ಕೆ 39 ಸಾವಿರ ಕೋಟಿ ರೂಪಾಯಿ ನೀಡಬೇಕು. ಬಿ.ಎಸ್.ಎನ್.ಎಲ್. ಸಾಲದ ಹಣವನ್ನು ಗಳಿಕೆಯ ಮೂಲಕ ಹೊಂದಿಸಿಕೊಡಬೇಕು
  7. ವೇತನ ಪರಿಷ್ಕರಣೆ ಹಾಗೂ ಪಿಂಚಣಿ ಪರಿಷ್ಕರಣೆ ಮಾಡಬೇಕು.
  8. ಎಫ್.ಟಿ.ಟಿ.ಎಚ್ ಸೇವೆಯ ಗುಣಮಟ್ಟ ಸುಧಾರಿಸಲು ತ್ವರಿತ ಕ್ರಮಕೈಗೊಳ್ಳಬೇಕು. ಪ್ರಸರಣ ಜಾಲಗಳನ್ನು ಬಲಪಡಿಸಬೇಕು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಲೋಹಿತ್, ಶಿವಶಂಕರ್ ಜಾಲಿಹಾಳ, ರಾಜು, ಸುನೀಲ್ ಕುಮಾರ್, ಕುನಾಲ್ ಕುಮಾರ್ ಉಪಸ್ಥಿತರಿದ್ದರು.

https://www.suddikanaja.com/2021/01/25/dial-112-launched-by-shivamogga-police-department/

error: Content is protected !!