ರೈಲು ಡಿಕ್ಕಿ ಹೊಡೆದು ಹರಿಗೆ ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರತಿ ವಾರದಂತೆ ಭಾನುವಾರ ಬಟ್ಟೆ ತೊಳೆಯುವುದಕ್ಕೆ ಹೋಗಿ ವಾಪಸ್ ಬರುವಾಗ ರೈಲು ಡಿಕ್ಕಿ‌ಹೊಡೆದ ಪರಿಣಾಮ ತೀವ್ರ ಗಾಯಗೊಂಡ ವ್ಯಕ್ತಿಯೊಬ್ಬ ಸ್ಥಳದಲ್ಲೇ‌ ಮೃತಪಟ್ಟಿರುವ ಘಟನೆ ನಡೆದಿದೆ.

READ | ವಾಟ್ಸಾಪ್ ವಿಡಿಯೋ ನಂಬಿದ ವ್ಯಕ್ತಿಗೆ ಕೆಬಿಸಿ ಹೆಸರಿನಲ್ಲಿ 30 ಸಾವಿರ ರೂ. ಮೋಸ

ಹರಿಗೆಯ ನಾಗರಾಜ್ (55) ಎಂಬುವವರು ಮೃತಪಟ್ಟಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಇವರು ಭಾನುವಾರವಾದ್ದರಿಂದ ಕೆಲಸಕ್ಕೆ ರಜೆ ಇತ್ತು. ಹೀಗಾಗಿ, ಚಾನಲ್ ನಲ್ಲಿ ಬಟ್ಟೆ ತೊಳೆಯುವುದಕ್ಕಾಗಿ ಹೋಗಿದ್ದ. ಬಟ್ಟೆಗಳನ್ನು ತೊಳೆದು ವಾಪಸ್ ಬರುವಾಗ ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

READ | ರೈಲ್ವೆ ಪ್ರಯಾಣಿಕರ ಭದ್ರತೆಗೆ ಶಿವಮೊಗ್ಗ ಪೊಲೀಸರಿಂದ ಕ್ರಾಂತಿಕಾರಿ ಹೆಜ್ಜೆ, ಈ ಕಾರ್ಡ್ ಇದ್ದರೆ ಸಾಕು ಸಂಕಟದಲ್ಲಿ ರೈಲ್ವೆ ಪೊಲೀಸರು ಹಾಜರ್

ರೈಲು ಡಿಕ್ಕಿ ಹೊಡೆದು ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ, ಮೃತರ‌ ಕುಟುಂಬದವರು ಬಂದಿದ್ದು, ಮರಣೋತ್ತರ ಪರೀಕ್ಷೆ ಬಳಿಕ‌ ಶವವನ್ನು ಅವರಿಗೆ ಒಪ್ಪಿಸಲಾಗಿದೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/06/04/current-shock-death/

error: Content is protected !!