ವಿಶ್ವವಿಖ್ಯಾತ ಜೋಗ ವೀಕ್ಷಿಸಲು ಬಂದ ಸಾವಿರಾರು ಜನ, ಸ್ಥಳೀಯರಲ್ಲಿ‌ ಮನೆ ಮಾಡಿದ ಭೀತಿ! ಜೋಗ ವೀಕ್ಷಣೆಗೆ ಗಂಟೆಗಟ್ಟಲೇ ಸರದಿ

 

 

ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನ ಜೋಗ‌ ಜಲಪಾತ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿದೆ. ಇದರಿಂದಾಗಿ, ಜೋಗ ಪರಿಸರದಲ್ಲಿ‌ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.

ಕೋವಿಡ್ ಸಂಕಟದ ನಡುವೆಯೂ 14 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದು, ವಿಶೇಷವಾಗಿತ್ತು. ಪಾರ್ಕಿಂಗ್ ಜಾಗ ಪೂರ್ಣ ಪ್ರಮಾಣದಲ್ಲಿ ವಾಹನಗಳಿಂದ ಆವೃತವಾಗಿತ್ತು. ಮಳೆಯು ಅಧಿಕ ಪ್ರಮಾಣದಲ್ಲಿ ಇಲ್ಲದ್ದರಿಂದ‌ ಜೋಗದ ನಾಲ್ಕೂ ಜಲಪಾತಗಳು ಸುಲಭವಾಗಿ ಗೋಚರವಾಗುತಿದ್ದವು. ಇದನ್ನು ನೋಡುವುದಕ್ಕಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಜನ ಆಗಮಿಸಿದ್ದರು. ಮೂರನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಯಿತು.
Jog falls 1
ಸರ್ಕಾರದ ಸೂಚನೆಯ ನಡುವೆಯೂ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದರೂ ಜೋಗ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪೊಲೀಸರು ಟ್ರಾಫಿಕ್ ನಿಯಂತ್ರಿಸುವುದಕ್ಕಾಗಿ ಹೆಣಗಾಡಿದರು.

error: Content is protected !!