ಸುದ್ದಿ ಕಣಜ.ಕಾಂ | SHIVAMOGGA | HEALTH
ಶಿವಮೊಗ್ಗ: ನಿರಂತರ ಇಳಿಕೆ ಆಗುತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗುರುವಾರ ಏಕಾಏಕಿ ಏರಿಕೆಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 71 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 56 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.
READ | ಪಬ್ಲಿಕ್ ಪ್ಲೇಸ್ ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರೇಡ್, ಸಿಕ್ಕ ಗಾಂಜಾವೆಷ್ಟು ಗೊತ್ತಾ?
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 25, ಭದ್ರಾವತಿ 5, ಶಿಕಾರಿಪುರ 2, ತೀರ್ಥಹಳ್ಳಿ 17, ಸೊರಬ 1, ಹೊಸನಗರ 8, ಸಾಗರ 11 ಮತ್ತು ಬಾಹ್ಯ ಜಿಲ್ಲೆಯ ಇಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,852 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 7,344 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
READ | ವಾರಾಂತ್ಯದಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಬಂದ್, ದೇವರ ದರ್ಶನಕ್ಕೆ ನಿರ್ಬಂಧ
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 69 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 37, ಕೋವಿಡ್ ಕೇರ್ ಸೆಂಟರ್ ನಲ್ಲಿ 27, ಖಾಸಗಿ ಆಸ್ಪತ್ರೆಯಲ್ಲಿ 29, ಹೋಮ್ ಐಸೋಲೇಷನ್ ನಲ್ಲಿ 158 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 11 ಸೋಂಕಿತರಿದ್ದಾರೆ. 331 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
https://www.suddikanaja.com/2021/06/05/shuvamigga-bhadravathi-corona-increase/