ಹೊಸ ಕಾರಲ್ಲಿ ಶಿವಮೊಗ್ಗಕ್ಕೆ ಬಂದ ಬಿ.ಎಸ್.ಯಡಿಯೂರಪ್ಪಗೆ ಅದ್ಧೂರಿ ಸ್ವಾಗತ

 

 

ಸುದ್ದಿ‌ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಮೊದಲ ಸಲ‌ ತವರಿಗೆ ಬಂದಿರುವ ಮಾಜಿ ಸಿಎಂ ಬಿ‌.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

https://www.suddikanaja.com/2021/08/23/school-and-college-re-open-at-shivamogga/

ಇತ್ತೀಚೆಗೆ ಕುಟುಂಬದೊಂದಿಗೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಬಿ.ಎಸ್.ವೈ. ಮೊದಲು ಭೇಟಿ ಮಾಡುತ್ತಿರುವುದೇ ತವರು ಕ್ಷೇತ್ರ. ಹೀಗಾಗಿ, ಅವರನ್ನು ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ರಾಜ್ಯ ಪ್ರವಾಸಕ್ಕಾಗಿ ಐಷಾರಾಮಿ ಕಾರು ಖರೀದಿಸಿರುವ ಯಡಿಯೂರಪ್ಪ ಅವರು ರಸ್ತೆ ಮಾರ್ಗದ ಮೂಲಕವೇ ಶಿವಮೊಗ್ಗಕ್ಕೆ ಬಂದಿದ್ದು ಸಂಜೆ ವಿನೋದ ನಗರದಲ್ಲಿರುವ ತಮ್ಮ‌ನಿವಾಸಕ್ಕೆ ತಲುಪಿದರು‌.

ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಪಕ್ಷದ ಪ್ರಮುಖರು ಪುಷ್ಪ ಗುಚ್ಚ ನೀಡಿ ಬಿ.ಎಸ್.ವೈ ಅವರಿಗೆ ಸ್ವಾಗತಿಸಿದರು.

ಸೆಲ್ಫಿಗಾಗಿ ಮುಗಿಬಿದ್ದ ಜನ
ಸಿಎಂ ಸ್ಥಾನದಿಂದ ಕೆಳಗಿಳಿದರೂ ಯಡಿಯೂರಪ್ಪ ಅವರ ಹವಾ ಕಡಿಮೆ ಆಗಿಲ್ಲ‌ ಎನ್ನುವುದಕ್ಕೆ ಶುಕ್ರವಾರ ಅವರನ್ನು ಸ್ವಾಗತಿಸಿ ಪರಿಯೇ ಸಾಕ್ಷಿ. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಲಿಸಿಕೊಂಡರು.
ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಪ್ರಮುಖರಾದ ಸಂತೋಷ್ ಬಳ್ಳಕೆರೆ, ಚನ್ನಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://www.suddikanaja.com/2021/08/07/official-announcement-of-portfolio-in-karnataka/

error: Content is protected !!