
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar) ಹಿರಿಯ ರಾಜಕಾರಣಿಯಾಗಿದ್ದು, ಪಕ್ಷನಿಷ್ಠರೂ ಆಗಿದ್ದಾರೆ. ಹೀಗಾಗಿ, ಸಚಿವ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ಪ್ರಮುಖ ಷಡಾಕ್ಷರಿ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಅಭಿವೃದ್ಧಿಗೋಸ್ಕರವಾದರೂ ಅವರನ್ನು ಪರಿಗಣಿಸಬೇಕು. ಎಂಪಿಎಂ, ವಿಐಎಸ್.ಎಲ್ ಮುಚ್ಚಿದ್ದು, ಅವುಗಳು ಪುನರಾರಂಭವಾಗಬೇಕಾದರೆ ಸಚಿವ ಸ್ಥಾನ ಬೇಕು ಎಂದರು.
READ | ಆಧಾರ್ ಕಾರ್ಡ್ ಅಪ್’ಡೇಟ್ ಮಾಡುವುದಾಗಿ ₹ 1.85 ಲಕ್ಷ ಮೋಸ!
ಭರವಸೆ ನೀಡಿದ್ದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷರೂ ಆದ ನೂತನ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಚುನಾವಣೆ ಪ್ರಚಾರಕ್ಕಾಗಿ ಬಂದಾಗ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಈ ಎಲ್ಲ ಕಾರಣಕ್ಕಾಗಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಸ್ಥಾನ ನೀಡದಿದ್ದರೆ ಹೋರಾಟ, ಹೈಕಮಾಂಡ್ ಮೊರೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್ ಮಾತನಾಡಿ, ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೂ ತರಲಾಗುವುದು ಎಂದರು.
ಸರ್ಕಾರ ಯಾರದ್ದೇ ಇರಲಿ ಇದುವರೆಗೆ ಭದ್ರಾವತಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಸಲವಾದರೂ ಅವಕಾಶ ನೀಡಬೇಕು. ಬುಧವಾರದ ಬಳಿಕ ಹೈಕಮಾಂಡ್’ಗೆ ಭೇಟಿಯಾಗಿ ಸಚಿವ ಸ್ಥಾನಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಭದ್ರಾವತಿ ನಹರಸಭೆ ಅಧ್ಯಕ್ಷೆ ಅನುಸುಧಾ ಮೋಹನ್, ಸರ್ವಮಂಗಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Court news | ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಪೋಸ್ಟ್ ಮಾಡಿದ ಮಹಿಳೆಗೆ 10 ತಿಂಗಳು ಜೈಲು