
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜೈಲು ವೃತ್ತದಲ್ಲಿರುವ ಕರ್ನಾಟಕ ಧ್ವಜ ಸ್ತಂಭವನ್ನು ತೆರವುಗೊಳಿಸಲು ಮುಂದಾದ ಸ್ಮಾರ್ಟ್ ಸಿಟಿ ಅಧಿಕಾರಿಗಳಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.
ಸ್ಮಾರ್ಟ್ ಸಿಟಿಯಿಂದ ವೃತ್ತ ಅಭಿವೃದ್ಧಿ ಪಡಿಸಬೇಕೆಂದು ಧ್ವಜಸ್ತಂಭ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ಜೆಸಿಬಿ ಸಹಾಯದಿಂದ ಕಟ್ಟೆಯನ್ನು ಒಡೆಯಲಾಗಿದೆ. ಈ ಘಟನೆ ನಡೆದಿದ್ದೇ ಜೈಲು ವೃತ್ತಕ್ಕೆ ಆಗಮಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
READ | ಆಧಾರ್ ಅಪಡೇಟ್ ಮಾಡುವುದಾಗಿ ₹1.85 ಲಕ್ಷ ಮೋಸ
ವಿರೋಧಕ್ಕೇನು ಕಾರಣ?
ಪ್ರತಿಭಟನಾಕಾರರ ಪ್ರಕಾರ, “ಧ್ವಜಸ್ತಂಭವನ್ನು ತೆರವುಗೊಳಿಸುವ ಬಗ್ಗೆ ಈ ಹಿಂದೆಯೂ ಚರ್ಚಿಸಲಾಗಿದೆ. ಆದರೆ, ಪೂರ್ವ ಮಾಹಿತಿ ನೀಡದೇ ಧ್ವಜಸ್ತಂಭದಲ್ಲಿ ಕನ್ನಡ ಧ್ವಜ ಹಾರಾಡುತ್ತಿರುವಾಗಲೇ ಜೆಸಿಬಿ ಮೂಲಕ ಕಟ್ಟೆ ಒಡೆಯಲಾಗಿದೆ. ಇದು ಖಂಡನೀಯ ಎಂದು ಆರೋಪಿಸಿದರು.
ಈ ಕ್ರಮ ವಿರೋಧಿಸಿ ಟೈಯರ್’ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜೈಲು ವೃತ್ತದಲ್ಲೇ ಧರಣಿ ಕುಳಿತರು.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳಿದ್ದೇನು?
“ಜೈಲು ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಂದರವಾದ ಯೋಗಮುದ್ರೆಯ ಕಲಾಕೃತಿ ರಚಿಸಿ ಆ ಸ್ಥಳದಲ್ಲಿ ಹಸಿರು ವೃತ್ತವನ್ನು ನಿರ್ಮಿಸುವ ಉದ್ದೇಶವಿದೆ. ಧ್ವಜಸ್ತಂಭ ಕೂಡ ಎತ್ತರದಲ್ಲಿದ್ದು, ಅದನ್ನು ತೆರವುಗೊಳಿಸಿ ಪಕ್ಕದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನಾಲ್ಕು ತಿಂಗಳ ಹಿಂದೆಯೇ ಕನ್ನಡ ಸಂಘಟನೆಗೊಂದರ ಮುಖಂಡರ ಜೊತೆ ಚರ್ಚೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಪೊಲೀಸರ ಮಧ್ಯಪ್ರದೇಶದಿಂದ ಪರಿಸ್ಥಿತಿ ತಿಳಿ
ಕನ್ನಡ ಪರ ಸಂಘಟನೆ ಮುಖಂಡರು ಏಕಾಏಕಿ ವೃತ್ತ ತೆರವಿಗೆ ಮುಂದಾಗಿದ್ದಕ್ಕೆ ಟೈಯರ್’ಗೆ ಬೆಂಕಿ ಇಟ್ಟು ಪ್ರತಿಭಟಿಸಿದ್ದು ಒಂದೆಡೆಯಾದರೆ, ರಸ್ತೆಯಲ್ಲೇ ಧರಣಿಗೆ ಕುಳಿತರು.
ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಮೋಹನ್ ರಾವ್, ವಿಜಯಕುಮಾರ್, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಪ್ರಮುಖರಾದ ರಂಗನಾಥ್, ಐಡಿಯಲ್ ಗೋಪಿ ಉಪಸ್ಥಿತರಿದ್ದರು.
Borwell fail | ಮಲೆನಾಡಿಗೆ ಎಚ್ಚರಿಕೆ, ಶಿವಮೊಗ್ಗದಲ್ಲಿ 29 ಬೋರ್’ವೆಲ್ ಫೇಲ್!