ಶಿಕ್ಷಕರ ವರ್ಗಾವಣೆ ತೆರವಿಗೆ ಕೋರ್ಟ್ ದಿಂದಲೇ ತಡೆಯಾಜ್ಞೆ: ಬಿ.ಸಿ. ನಾಗೇಶ್

 

 

ಸುದ್ದಿ ಕಣಜ.ಕಾಂ | KARNATAKA | EDUCATION
ಶಿವಮೊಗ್ಗ: ಕೋರ್ಟ್ ಮೂಲಕವೇ ಶಿಕ್ಷಕರ ವರ್ಗಾವಣೆ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

READ | 1ರಿಂದ 5ನೇ ತರಗತಿ ಆರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದಲ್ಲಿ ಪ್ರಮುಖ ಹೇಳಿಕೆ

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆಗೆ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಇದರ ಹಿಂದಿನ ಉದ್ದೇಶ ಗೊತ್ತಿಲ್ಲ ಎಂದರು.
ಈ ತಡೆಯಾಜ್ಞೆ ತಂದಿರುವುದರಿಂದ ಅನೇಕ ಶಿಕ್ಷಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ, ಅವಶ್ಯವಿದ್ದರೆ ಕೋರ್ಟ್ ಮೂಲಕವೇ ತಡೆಯಾಜ್ಞೆ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಪ್ರಕರಣ ಹೆಚ್ಚಾದಲ್ಲಿ ಶಾಲೆ ಬಂದ್
ಕೊರೊನಾ ಮೂರನೇ ಅಲೆ ಏರಿಕೆ ಆಗುತ್ತಿದೆ. ಈಗಾಗಲೇ ಕೇರಳಾದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದು ಉತ್ತಮ ಬೆಳವಣಿಗೆ. ಒಂದುವೇಳೆ, ಬರುವ ದಿನಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ಶಾಲೆ ಬಂದ್ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

https://www.suddikanaja.com/2021/06/17/demand-to-change-structure-of-shivamogga-airport/

error: Content is protected !!