ಅರ್ಧ ಲಕ್ಷದ ರೂ. ದಾಟಿದ ಅಡಿಕೆ ದರ, ಬೆಳೆಗಾರರ ಮೊಗದಲ್ಲಿ ಮಂದಹಾಸ, ಒಂದೇ ದಿನದಲ್ಲಿ 3 ಸಾವಿರ ರೂ. ಏರಿಕೆ!

 

 

ಸುದ್ದಿ ಕಣಜ.ಕಾಂ | KARNTAKA | ARECANUT
ಶಿವಮೊಗ್ಗ/ಕುಂದಾಪುರ: ಅಡಿಕೆ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.

https://www.suddikanaja.com/2021/03/06/areca-nut-growers-demand-for-one-district-one-product/

ಗಣೇಶ ಚತುರ್ಥಿ ಹಬ್ಬ ಇನ್ನಷ್ಟು ಶುಭಕರವಾಗಿದ್ದು, ಕುಂದಾಪುರ ಮಾರುಕಟ್ಟೆ ದೈನಂದಿನ ವರದಿ ಪ್ರಕಾರ, ಕೆಂಪು ಅಡಿಕೆ ದರವು ಕ್ವಿಂಟಾಲ್ ಗೆ ಗರಿಷ್ಠ 52,000 ಹಾಗೂ ಮಾದರಿ 51,500 ರೂಪಾಯಿ ದಾಖಲಾಗಿದೆ.

ಮೂರ್ನಾಲ್ಕು ತಿಂಗಳುಗಳಿಂದ ಕೆಂಪು ಅಡಿಕೆಯ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿದ್ದು, ಶುಕ್ರವಾರ 48,000 ರೂ. ಇದ್ದ ಬೆಲೆಯು ಶನಿವಾರದಂದು ಗರಿಷ್ಠ 52,000 ರೂ.ಗೆ ನಮೂದು ಆಗಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 50,000 ರೂ. ದಾಖಲಾಗಿದದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಈ ಸಲ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದು, ದರ ಕೂಡ ಸ್ಥಿರವಾಗಿದೆ.
ಅಡಿಕೆ ಬೆಲೆ ಗಗನಮುಖಿ
ಅಡಿಕೆ ಬೆಲೆಯು ಸೆಪ್ಟೆಂಬರ್ 1ರಂದು ಕನಿಷ್ಠ 43,500 ರೂ. ಹಾಗೂ ಗರಿಷ್ಠ 47,100 ರೂ. ಇತ್ತು. ಸೆ.3ರಂದು ಕನಿಷ್ಠ 26,090, ಗರಿರ್óಟ 51,509, ಸೆ.11ರಂದು ಕನಿಷ್ಠ 36,600, ಗರಿಷ್ಠ 52,000 ರೂ. ದಾಖಲಾಗಿದೆ.

https://www.suddikanaja.com/2021/01/28/areca-nut-added-in-drugs-category-blunder-by-krishi-marata-vahini/

error: Content is protected !!