ಎರಡು ಸಂಖ್ಯಾಬಲವಿದ್ದರೂ ಶಿರಾಳಕೊಪ್ಪ ಪಪಂ ಬಿಜೆಪಿ ತೆಕ್ಕೆಗೆ

 

 

ಸುದ್ದಿ‌ ಕಣಜ.ಕಾಂ

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಕೇವಲ ಎರಡು ಸಂಖ್ಯಾಬಲವಿದ್ದರೂ ಬಿಜೆಪಿ ಅಧಿಕಾರದ ಚಿಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮಂಗಳವಾರ ಉಮೇದುವಾರಿಕೆ ಸಲ್ಲಿಸಲು ಅವಕಾಶವಿತ್ತು. ಆದರೆ, ವಿಪಕ್ಷದಿಂದ ಯಾರೂ ಹಾಜರಾಗದೇ ಹಾಗೂ ಉಮೇದುವಾರಿಕೆ ಸಹ ಮಾಡದೇ ಇದ್ದುದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮಂಜುಳಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ವಸಂತ್ ನಾಮಪತ್ರ ಸಲ್ಲಿಸಿ, ಅವಿರೋಧ ಆಯ್ಕೆ ಆಗಿದ್ದಾರೆ‌.
ಸಂಖ್ಯಾಬಲ: ಶಿರಾಳಕೊಪ್ಪ ಪ.ಪಂ.ನಲ್ಲಿ ಒಟ್ಟು 17 ಸ್ಥಾನಗಳಿದ್ದು, ಅದರಲ್ಲಿ ಕಾಂಗ್ರೆಸ್- 7 , ಜೆಡಿಎಸ್- 3, ಇತರರು 5 ಸದಸ್ಯರಿದ್ದರು‌.
* ಬಡವರ ಕಣ್ಣೀರು ಒರೆಸುವ ಸಂಕಲ್ಪ: ಎಲ್ಲರ ಸಹಕಾರದಿಂದ ಶಿಕಾರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೇ ರೀತಿ, ಶಿರಾಳಕೊಪ್ಪದಲ್ಲೂ ಅವಿರೋಧ ಆಯ್ಕೆಯಾಗಿದೆ‌. ಮುಂದಿನ ದಿನಗಳಲ್ಲಿ ಪಕ್ಷಭೇದ ಮರೆತು ಎಲ್ಲ ವಾರ್ಡ್ ಗಳ ಅಭಿವೃದ್ಧಿಗೆ ಶ್ರಮಿಸೋಣ. ಯಾರೂ ಸೂರಿಲ್ಲ ಎಂದು ಕಷ್ಟ ಪಡಬಾರದು. ಆ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಶಪಥ ಮಾಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!