Oscar Fernandes | ಆಸ್ಕರ್ ಫರ್ನಾಂಡೀಸ್ ‌ನಿಧನ, ಇವರ ಬಗ್ಗೆ ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ | KARNATAKA | POLITICS
ಮಂಗಳೂರು: ಮಾಜಿ ಸಚಿವ, ರಾಜ್ಯ ಸಭೆ ಸದಸ್ಯ ಆಸ್ಕರ್ ಫರ್ನಾಂಡೀಸ್ (80) ಅವರು ಸೋಮವಾರ ನಿಧನರಾಗಿದ್ದಾರೆ.
ಜುಲೈ 18ರಂದು ಮನೆಯಲ್ಲಿ ಯೋಗ ಮಾಡುತಿದ್ದಾಗ ಜಾರಿ ಬಿದ್ದು ತಲೆಗೆ ಏಟಾಗಿತ್ತು. ಮಿದುಳಿನಲ್ಲಿ ರಕ್ತ ಹೆಪ್ಪು ಗಟ್ಟಿದ್ದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೂಡ ಮಾಡಲಾಗಿತ್ತು. ಯೋಗಕ್ಷೇಮ ವಿಚಾರಿಸುವುದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ಕೂಡ ನೀಡಿದ್ದರು.

https://www.suddikanaja.com/2021/02/16/condolence-on-death-of-rama-jois/

ಅಪಾರ ರಾಜಕೀಯ ಅನುಭವ
ಆಸ್ಕರ್ ಫರ್ನಾಂಡೀಸ್ ಅವರು ಅಪಾರ ರಾಜಕೀಯ ಅನುಭವ ಹೊಂದಿದ ವ್ಯಕ್ತಿ. 1941 ಮಾರ್ಚ್ 27ರಂದು ಉಡುಪಿಯಲ್ಲಿ ಅವರು ಜನಿಸಿದರು.
1980 ಜನವರು 18ರಲ್ಲಿ ಉಡುಪಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದರು. ಅಲ್ಲಿಂದ ಆರಂಭಗೊಂಡ ಅವರ ರಾಜಕೀಯ ಜೀವನ ಸರ್ಕಾರದ ಅವಧಿಯಲ್ಲಿ ಹಲವು ಮಜಲುಗಳನ್ನು‌ ನೀಡಿತ್ತು. 17 ಜೂನ್ 2013ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಒಟ್ಟು ಐದು ಬಾರಿ ಉಡುಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಆಸ್ಕರ್‌ ಅವರ ತಂದೆ ರೂಕ್‌ ಫೆರ್ನಾಂಡಿಸ್‌ ಅವರು‌ ಸರ್ಕಾರಿ ಸಂಯುಕ್ತ ಪಿಯು ಕಾಲೇಜಿನ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದರು. ಹಾಗೂ ಮಣಿಪಾಲ ತಾಂತ್ರಿಕ ವಿದ್ಯಾಲಯದ ಮೊದಲ ಅಧ್ಯಕ್ಷರಾಗಿಯೂ ಇದ್ದರು. ತಾಯಿ ಲಿಯೋನಿಸ್ಸಾ ಎಂ. ಫೆರ್ನಾಂಡಿಸ್‌ ಅವರು ಮ್ಯಾಜೀಸ್ಟ್ರೇಟ್‌ ಆಗಿ ನೇಮಕಗೊಂಡ ಭಾರತದ ಮೊದಲ ಮಹಿಳೆಯಾಗಿದ್ದರು.
ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಬಳಿಕ‌ ಫರ್ನಾಂಡೀಸ್ ರಾಜಕೀಯ ಪಾದಾರ್ಪಣೆ ಮಾಡಿದರು.
1984, 89, 91 ಹಾಗೂ 96 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿ ಇವರು ಸತತ ಆಯ್ಕೆಯಾದರು. 1998ರಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.
ಆಸ್ಕರ್ ಫರ್ನಾಂಡೀಸ್ ಅವರು ಸಾರಿಗೆ ಖಾತೆ, ಅಂಕಿ ಅಂಶ ಖಾತೆ, ಯುವ ಜನ ಮತ್ತು ಕ್ರೀಡಾ ಖಾತೆ, ಕಾರ್ಮಿಕ ಸಚಿವಾಲಯ, ಅನಿವಾಸಿ ಭಾರತೀಯರ ಸಚಿವಾಲಯಗಳ ಸಚಿವರಾಗಿದ್ದರು. ಎರಡು ಅವಧಿಗಳ ಕಾಲ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಸದಸ್ಯರಾಗಿದ್ದರು. 2004ರಲ್ಲಿ‌ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದರು.

https://www.suddikanaja.com/2021/07/10/compensation-to-labors/

error: Content is protected !!