ಹಿಂದಿ‌ ಹೇರಿಕೆ ವಿರುದ್ಧ ಶಿವಮೊಗ್ಗದಲ್ಲೂ ವ್ಯಕ್ತವಾಯಿತು ವಿರೋಧ

 

 

ಸುದ್ದಿ ಕಣಜ.ಕಾಂ | DISTRICT | HINDI DIWAS
ಶಿವಮೊಗ್ಗ: ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯಿಂದ ಮಂಗಳವಾರ ಪ್ರತಿಭಟನೆ ಮಾಡಲಾಯಿತು.

READ | ಕನ್ನಡಿಗರಿಗೆ ಬೇಡವಾದ ‘ಹಿಂದಿ ದಿವಸ್’ ಏಕೆ ಬೇಕು, ‘ಸುದ್ದಿ ಕಣಜ’ ಪೋಲ್ ನಲ್ಲಿ ಓದುಗರೇನು ಹೇಳಿದರು?

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ಇದರಿಂದ ದೇಶದ ಐಕ್ಯತೆಗೆ ಧಕ್ಕೆ ಆಗಲಿದೆ. ಯಾವುದೇ ಕಾರಣಕ್ಕೂ ಹಿಂದಿ ದಿವಸ್ ಹೆಸರಿನಲ್ಲಿ ಭಾಷೆಯನ್ನು ಹೇರಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹಿಂದಿ ಕಲಿಯುವ ಭಾಷಾ ಸೂತ್ರವನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ವೇದಿಕೆಯ ಜಿಲ್ಲಾಧ್ಯಕ್ಷ ಶಿವಣ್ಣ ಸೂಡೂರು, ಪ್ರಮುಖರಾದ ಪ್ರಕಾಶ್ ತಮ್ಮಡಿಹಳ್ಳಿ, ಶುಭೋದಯ, ಲಕ್ಷ್ಮೀ, ಮಂಜುನಾಥ್, ಅವಿನಾಶ್ ಉಪಸ್ಥಿತರಿದ್ದರು.

error: Content is protected !!