ದೂರು ದಾಖಲಾದ ಒಂದೇ ದಿನದಲ್ಲಿ ಇಬ್ಬರು ಕಳ್ಳರ ಬಂಧನ

 

 

ಸುದ್ದಿ‌ ಕಣಜ.ಕಾಂ | TALUK | CRIME
ಸೊರಬ: ತಾಲೂಕಿನ ಜಡೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ‌ ಶಾಲೆಯಲ್ಲಿ ಬ್ಯಾಟರಿ ಕಳ್ಳತನ ಮಾಡಿದ್ದ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ.

READ | ಸ್ಮಾರ್ಟ್ ಸಿಟಿಗೆ ಸೇರಿದ ಲಕ್ಷಾಂತರ ಮೌಲ್ಯದ ಕೇಬಲ್ ಸುಟ್ಟು ಭಸ್ಮವಾಗಲು ಕಾರಣವೇನು ಗೊತ್ತಾ?

ಆರೋಪಿಗಳಿಂದ ಅಂದಾಜು ₹15,000 ಮೌಲ್ಯದ ಒಟ್ಟು 15 ಯುಪಿಎಸ್ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ಶಾಲೆಯಲ್ಲಿ 16 ಯುಪಿಎಸ್ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಆನವಟ್ಟಿ ಪೊಲೀಸ್ ಠಾಣೆಗೆ ಶಿಕ್ಷಕರು ದೂರು ನೀಡಿದ್ದರು. ಕಲಂ 454, 457, 380 ಐಪಿಸಿ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಪೊಲೀಸರು ಒಂದೇ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದಾರೆ.

error: Content is protected !!