ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ 19 (covid 19) ಕಾಯಿಲೆಯಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವಂತೆ ಆರ್ಥಿಕ ಸಹಾಯಕ್ಕೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಷನ್ (aditya birla capital foundation) ಮುಂದೆ ಬಂದಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೋವಿಡ್ ವಿದ್ಯಾರ್ಥಿ ವೇತನ (covid scholarship) ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಬಹುದು.
READ | ಪಿಯುಸಿ ಪಾಸ್ ಆದವರಿಗ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ
ಯಾರಿಗೆಷ್ಟು ಸ್ಕಾಲರ್ಶಿಪ್?
1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ₹24 ಸಾವಿರಗಳು, 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹30 ಸಾವಿರಗಳು, ವೃತ್ತಿಪರ ಪದವಿ ಪೂರ್ವ (pu) ವಿದ್ಯಾರ್ಥಿಗಳಿಗೆ ₹60 ಸಾವಿರಗಳು ಹಾಗೂ ಸಾಮಾನ್ಯ ವೃತ್ತಿಪರ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ₹36 ಸಾವಿರಗಳ ಆರ್ಥಿಕ ಧನ ಸಹಾಯ ನೀಡಲಾಗುತ್ತಿದ್ದು, ಅರ್ಹರು http://www.buddy4study.com/page/aditya-birla-capital-covid-schoarship-programme ಆನ್ಲೈನ್ ಮೂಲಕ ಜನವರಿ 31ರೊಳಗಾಗಿ ಅರ್ಜಿ ಸಲ್ಲಿಸುವಂತೆ ಉಪ ನಿದೇರ್ಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ. ದೂ.ಸಂ.: 08182-295709 ಅನ್ನು ಸಂಪರ್ಕಿಸುವುದು.
https://www.suddikanaja.com/2021/11/24/sagar-taluk-yadehalli-indira-gandhi-hostel-students-protest-against-principal/