GOLD PRICE | ಚಿನ್ನದ ದರ ಇನ್ನಷ್ಟು ಅಗ್ಗ, ಇಳಿಯುತ್ತಲೇ ಇದೆ‌ ಬಂಗಾರದ ಬೆಲೆ, ಇದಕ್ಕೇನು‌ ಕಾರಣ, ಇನ್ನಷ್ಟು ದಿನ ಇರಲಿದೆ ಇದೇ ಸ್ಥಿತಿ

 

 

ಸುದ್ದಿ‌ ಕಣಜ.ಕಾಂ | NATIONAL | GOLD RATE
ನವದೆಹಲಿ/ಬೆಂಗಳೂರು: ಚಿನ್ನ ಪ್ರಿಯರಿಗೆ ಹಬ್ಬವೋ‌ ಹಬ್ಬ. ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ದಿನೇ ದಿನೇ ಚಿನ್ನದ ಬೆಲೆಯು ಇಳಿಕೆ ಆಗುತ್ತಲೇ ಇದ್ದು, ಶನಿವಾರವೂ ಈ ಭರಾಟೆ ಮುಂದುವರಿದಿತ್ತು.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ‌ ಇಳಿಕೆ

ಕಳೆದ ವರ್ಷ 2020ರ ಸೆಪ್ಟೆಂಬರ್ 18ರಂದು (22 ಕ್ಯಾರಟ್) ಪ್ರತಿ 10 ಗ್ರಾಂ‌ ಚಿನ್ನದ ಬೆಲೆಯು ₹53,180 ಇತ್ತು. ಆದರೆ, 2021ರ ಇದೇ ದಿನ ₹45,390 ದಾಖಲಾಗಿದೆ. ₹7,790 ಬೆಲೆ ವ್ಯತ್ಯಾಸವಾಗಿದೆ.
ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಸಾಧ್ಯತೆ
ಸೆಪ್ಟೆಂಬರ್ 9ರಂದು ಚಿನ್ನದ ಬೆಲೆಯು 22 ಕ್ಯಾರಟ್ ಗೆ ₹46,000 ಹಾಗೂ 24 ಕ್ಯಾ.ಗೆ ₹47,000 ಇತ್ತು. ಸೆ.15ರ ಹೊತ್ತಿಗೆ ಪ್ರತಿ 10 ಗ್ರಾಂಗೆ ₹330 ಏರಿಕೆ ಕಂಡಿತ್ತು. ಆದರೆ, ಸೆ.16ರಿಂದ ನಿರಂತರ ಇಳಿಕೆ ಆಗುತ್ತಲೇ ಇದೆ.
ಅಮೆರಿಕಕ್ಕೂ ಭಾರತೀಯ ಚಿನ್ನದ ದರಕ್ಕೂ ನೇರ ಸಂಬಂಧವಿದೆ. ಅಲ್ಲಿ ಇತ್ತೀಚೆಗೆ ಚಿಲ್ಲರೆ‌ ವ್ಯಾಪಾರದಲ್ಲಿ ಏರಿಕೆ‌ ಕಂಡು ಬಂದಿದ್ದು, ಜಾಗತಿಕ ಮಟ್ಟದಲ್ಲಿ ಹಳದಿ‌ ಲೋಹ (ಚಿನ್ನ)ದ ಬೆಲೆ‌ ಶೇ.3ರಷ್ಟು‌ ಇಳಿಕೆ ಆಗಿದೆ. ಸಾಲದ ಮೇಲಿನ ಬಡ್ಡಿ ದರ ಸಹ ಏರುಮುಖವಾಗಲಿವೆ. ಬಾಂಡ್‌ ಖರೀದಿಯಲ್ಲು ಹೆಚ್ಚಳವಾಗಿದೆ. ಇವೆಲ್ಲವು ಭಾರತೀಯ ಚಿನ್ನದ ಬೆಲೆಯನ್ನು ಪಾತಾಳಕ್ಕೆ‌ ಕುಸಿಯುವಂತೆ ಮಾಡಿವೆ. ಇನ್ನಷ್ಟು ದಿನ ಬೆಲೆ‌ ಇಳಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://www.suddikanaja.com/2021/09/18/arecanut-price-hike-and-crossed-55k/

error: Content is protected !!