ಮಕ್ಕಳಿಗೆ ತಿಂಡಿ ತರಲು ಹೋದ ವ್ಯಕ್ತಿಯ ಮೇಲೆ ಮಚ್ಚು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಮಕ್ಕಳು, ಪತ್ನಿಗಾಗಿ ತಿಂಡಿ ತರಲು ಹೋಗುತಿದ್ದಾಗ ಕಿಡಿಗೇಡಿಗಳು ಮಚ್ಚು ದೊಣ್ಣೆಯಿಂದ ಹಲ್ಲೆ‌ ಮಾಡಿದ್ದು, ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಗರದ ಟ್ಯಾಂಕ್ ಮೊಹಲ್ಲಾದ ಏಳನೇ ಕ್ರಾಸ್ ಬಳಿ ಅನಿಲ್ ಎಂಬಾತನ‌ ಮೇಲೆ ಮಾರಣಾಂತಿಕ ‌ಹಲ್ಲೆ ನಡೆಸಲಾಗಿದೆ.

READ | ಐಎಎಸ್, ಕೆಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಷ್ಯವೇತನ ಸಹಿತ ಉಚಿತ ತರಬೇತಿ, ಎಲ್ಲೆಲ್ಲಿ ತರಬೇತಿ, ಮಾಹಿತಿಗಾಗಿ ಕ್ಲಿಕ್‌ ಮಾಡಿ

ಅನಿಲ್ ದಾವಣಗೆರೆಯಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಆದರೆ, ಈತನ ಪತ್ನಿ ಹಾಗೂ‌ ಮಕ್ಕಳು ಶಿವಮೊಗ್ಗದಲ್ಲಿ ಇರುತ್ತಾರೆ. ಈತ ಶಿವಮೊಗ್ಗಕ್ಕೆ ಬಂದಿದ್ದು, ಐದಾರು ಜನ ಸೇರಿ ಹಲ್ಲೆ ಮಾಡಿದ್ದಾರೆ.
ತಲೆ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯ
ಏಕಾಏಕಿ‌ ಅನಿಲ್ ಮೇಲೆ ಹಲ್ಲೆ ಮಾಡಿದ್ದು, ಹೊಟ್ಟೆ, ಮೈ ಕೈ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಬೋಗ, ಕಿರಣ್, ಗೌತಮ್, ಅವಿ ಇನ್ನಿತರರು ಸೇರಿ ಹಲ್ಲೆ ಮಾಡಿರುವುದಾಗಿ‌ ಶಂಕೆ ವ್ಯಕ್ತಪಡಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ‌ ನಡೆದಿದೆ.

https://www.suddikanaja.com/2021/09/08/three-accused-arrested/

error: Content is protected !!