ಮೇದಾರಕೇರಿಯಲ್ಲಿ ಚಾಕೂ ತೋರಿಸಿ ದಂಪತಿಗಳ ದರೋಡೆ ಮಾಡಿದ‌ ವ್ಯಕ್ತಿ ಅರೆಸ್ಟ್

 

 

ಸುದ್ದಿ‌ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದಂಪತಿಗೆ ಚಾಕೂ ತೋರಿಸಿ ಬೆದರಿಸಿ ಮೊಬೈಲ್‌ ಕಸಿದುಕೊಂಡಿದ್ದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ.
ಶನಿವಾರ ಸಂಜೆ ಮೇದಾರಕೇರಿ ಸಮೀಪ ಪಿ ಆ್ಯಂಡ್ ಟಿ ನಿವಾಸಿಗಳು ಹೋಗುತ್ತಿದ್ದಾಗ ದರೋಡೆ ಮಾಡಲಾಗಿದೆ. ಹೊಂಡಾ ಆ್ಯಕ್ಟಿವಾದಲ್ಲಿ ಪತ್ನಿಯನ್ನು ಹಿಂಬದಿ‌ ಕೂಡಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆ ಬೈಕಿನಲ್ಲಿ ಬಂದ ದುಷ್ಕರ್ಮಿ ಚಾಕೂ ತೋರಿಸಿ, ಮೊಬೈಲ್ ಕಸಿದುಕೊಂಡು ಓಡಿ ಹೋಗಿದ್ದಾನೆ.

READ | ಸಕ್ರೆಬೈಲಿನಲ್ಲಿದ್ದ ರಾಜ್ಯದ ಹಿರಿಯ ಆನೆ ಗಂಗಾ ಸಾವು, ಗಂಡಾನೆಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತಿದ್ದ ಹಿರಿಯಾನೆ

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಒಂದೇ‌ ದಿನದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿಂದ 1 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡವರ ಪತ್ತೆ ಕಾರ್ಯ ನಡೆದಿದೆ.

error: Content is protected !!