SUDDI KANAJA EXCLUSIVE | ವಿಜಯನಗರ ಜಿಲ್ಲೆಗೆ ಡಿಸಿ, ಎಸ್.ಪಿ ಆಯ್ಕೆ ಮಾಡಿ ಸರ್ಕಾರ ಆದೇಶ

 

 

ಸುದ್ದಿ ಕಣಜ.ಕಾಂ | KARNATAKA | VIJAYANAGARA
ಬೆಂಗಳೂರು: ಐಪಿಎಸ್ ಅಧಿಕಾರಿ ಡಾ.ಕೆ.ಅರುಣ್ ಅವರನ್ನು ವಿಜಯನಗರ ಜಿಲ್ಲೆಗೆ ಎಸ್.ಪಿ.ಯಾಗಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿಎಂಟಿಸಿ ಯ (ಭದ್ರತೆ ಮತ್ತು ವಿಚಕ್ಷಣ) ನಿರ್ದೇಶಕ ಮತ್ತು ಎಸ್‍ಪಿಯಾಗಿದ್ದ ಇವರನ್ನು ಹೊಸ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ.

Vijaya nagara sp dcಪಿ.ಅನಿರುದ್ಧ ಶ್ರವಣ್ ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ. ಇವರು ಆರ್.ಡಿ.ಪಿ.ಆರ್. ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಕ್ಷಣಕ್ಕೆ ವರ್ಗಾವಣೆ ಆದೇಶ ಜಾರಿಗೆ ಬರುವಂತೆ ಸರ್ಕಾರ ತಿಳಿಸಿದೆ.

READ | ಆಭರಣ ಪ್ರಿಯರಿಗೆ ಶುಭ ಸುದ್ದಿ, ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ

2020ರ ನವೆಂಬರ್ 18ರಂದು ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಸರ್ಕಾರ‌ ಘೋಷಣೆ ಮಾಡಿತ್ತು. ಬರುವ ಅಕ್ಟೋಬರ್ 3ರಂದು ವಿಜಯನಗರ ಹೊಸ‌ ಜಿಲ್ಲೆಯಾಗಿ ಉದ್ಘಾಟನೆಗೊಳ್ಳಲಿದೆ. ವಿಧ್ಯುಕ್ತ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಅದಕ್ಕೂ ಮುಂಚೆಯೇ ಖಡಕ್ ಅಧಿಕಾರಿಗಳು ಎಂದೇ ಹೆಸರು ಮಾಡಿರುವ ಡಾ.ಕೆ.ಅರುಣ್ ಹಾಗೂ ಅನಿರುದ್ಧ‌ ಶ್ರವಣ್ ಅವರನ್ನು ಜಿಲ್ಲೆಗೆ ಮೊದಲನೇ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ. ಹೀಗಾಗಿ, ಜಿಲ್ಲೆಯ ಅಭಿವೃದ್ಧಿಯ ಕನಸು ಇನ್ನಷ್ಟು ಚಿಗುರೊಡೆದಿದೆ.
ಜಿಲ್ಲೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ
ವಿಜಯನಗರ ಜಿಲ್ಲೆಯು 5,644 ಕಿ.ಮೀ. ವಿಸ್ತೀರ್ಣ ಪ್ರದೇಶವನ್ನು‌ ಹೊಂದಿದೆ. ಇದಕ್ಕೆ ಒಟ್ಟು ಆರು ತಾಲೂಕು(ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ), 18 ಹೋಬಳಿಗಳು ಸೇರಿವೆ. ಮುಖ್ಯವಾಗಿ ಯುನೆಸ್ಕೋ ಮಾನ್ಯತೆ ಪಡೆದ ಆಕರ್ಷಣೀಯ ಐತಿಹಾಸಿಕ ತಾಣ ಹಂಪಿ ಹಾಗೂ ಕನ್ನಡ ವಿವಿ ಕೂಡ ಜಿಲ್ಲೆಗೆ ಸಂಬಂಧಿಸಿದೆ. 

error: Content is protected !!