ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ರಾಷ್ಟ್ರೀಯ ಹೆದ್ದಾರಿ (National highway) 169-ಎ ರಲ್ಲಿ ಇದ್ದಕ್ಕಿದ್ದಂತೆ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.
ಮರಕ್ಕೆ ಬೆಂಕಿ ಹತ್ತಿದ ವಿಡಿಯೋ ಜನರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಭಾರಿ ವೈರಲ್ ಆಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಠಾಣೆಯ ತೂದೂರು ಸಮೀಪ ವಿದ್ಯುತ್ ತಗುಲಿ ಅಗ್ನಿ ಅವಘಡ ಸಂಭವಿಸಿದೆ.
READ | ಬೀಗರ ಊಟಕ್ಕೆಂದು ಹೊರಟಾಗ ಮನೆ ಪಕ್ಕದವರಿಂದ ಬಂತು ಕರೆ, ಮಾಲೀಕರು ಶಾಕ್
ಬೆಂಕಿ ತಾಕಿದ್ದು ಹೇಗೆ?
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಒಣಗಿದ ಮರವೊಂದಿತ್ತು. ಅದಕ್ಕೆ ವಿದ್ಯುತ್ ತಗುಲಿ ಶಾರ್ಟ್ ಸಕ್ರ್ಯೂಟ್ ಆಗಿದೆ. ಆಗ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ.
ಬೆಳಗಿನ ಜಾವ 4 ಗಂಟೆಯ ಹೊತ್ತಿಗೆ ಬೆಂಕಿ ಹತ್ತಿದ್ದು, ರಸ್ತೆ ಪಕ್ಕವೇ ಮರ ಇದ್ದುದ್ದರಿಂದ ವಾಹನ ಸವಾರರು ಮುಂದೆ ಬರಲು ಹಿಂದೇಟು ಹಾಕಿದ್ದರು. ಹೀಗಾಗಿ, ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಕಿ ತಗುಲಿರುವ ವಿಚಾರವನ್ನು ಇಆರ್.ಎಸ್ ಸಿಬ್ಬಂದಿಗೆ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಯನ್ನು ನಂದಿಸಿದ್ದಾರೆ.