ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ನಗರದಲ್ಲಿ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
4ರಂದು ಪವರ್ ಕಟ್
ಸ್ಮಾಟ್ ಸಿಟಿ ಯೋಜನೆ ಅಡಿ ಯು.ಜಿ. ಕೇಬಲ್ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದೆ. ಹೀಗಾಗಿ, ನಗರ ಉಪ ವಿಭಾಗ ಎರಡರ ಘಟಕ 4ರ ವ್ಯಾಪ್ತಿಯಲ್ಲಿ ಅಕ್ಟೋಬರ್ 4ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಟ್ಯಾಂಕ್ ಮೊಹಲ್ಲಾ ಭಾಗದಲ್ಲಿ 5ರಂದು ಪವರ್ ಕಟ್
`ಮಾಡೆಲ್ ಸಬ್ ಡಿವಿಷನ್’ ಯೋಜನೆ ಅಡಿ ಸ್ಪನ್ ಪೋಲ್ ಅಳವಡಿಕೆ ಕಾರ್ಯ ಇರುವುದರಿಂದ ಅ.5ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.