ಸುದ್ದಿ ಕಣಜ.ಕಾಂ | TALUK | CRIMEN NEWS
ಸೊರಬ: ವಿದ್ಯುತ್ ತಂತಿ ತಗುಲಿ ಒಬ್ಬ ಯುವಕ ಹಾಗೂ ಮೂರು ಜಾನುವಾರುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಆನವಟ್ಟಿ ಬಳಿಯ ಸಮನವಳ್ಳಿಯಲ್ಲಿ ನಡೆದಿದೆ.
ಗೊಲ್ಲರ ತಾಂಡಾದ ನಿವಾಸಿ ಕುಮಾರ್ (28)ಮೃತ ಯುವಕ. ರಾತ್ರಿ 10 ಗಂಟೆಯ ಸುಮಾರಿಗೆ ಮೇಯಲು ಹೋದ ಜಾನುವಾರಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ತುಂಡಾಗಿ ಬಿದ್ದಿ ವಿದ್ಯುತ್ ತಂತಿ ತಗುಲಿ ಘಟನೆ ಸಂಭವಿಸಿದೆ.
ಅವಘಡದಲ್ಲಿ ಒಂದು ಜರ್ಸಿ, 2 ಎತ್ತುಗಳು ಮೃತಪಟ್ಟಿವೆ. ಜಾನುವಾರುಗಳನ್ನು ತರಲು ಹೋದ ಕುಮಾರ್ ಇನ್ನೂ ಬಾರದೇ ಇರುವುದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಆಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.