ತ್ಯಾವರೆಕೊಪ್ಪ ಬಳಿ ಭೀಕರ ಅಪಘಾತ, ಕರ್ತವ್ಯ ಪ್ರಜ್ಞೆ ಮೆರೆದ ಡಿವೈ.ಎಸ್.ಪಿ.

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ದ್ವಿಚಕ್ರ ವಾಹನ ಮತ್ತು ಕಾರ್ ಮಧ್ಯೆ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.
ಬೈಕ್’ನಲ್ಲಿ ಆಯನೂರು ಕಡೆಗೆ ಹೋಗುತ್ತಿದ್ದ ಇಬ್ಬರು ದಿಢೀರ್‌ ಆಗಿ ಶಿವಮೊಗ್ಗ ಕಡೆ ವಾಪಸ್ ಬರುವಾಗ ಕಾರು ಡಿಕ್ಕಿ ಹೊಡೆದಿದೆ. ಇದರಲ್ಲಿ ಗೋಪಾಳ ಮೂಲದ 24 ವರ್ಷದ ಯುವಕನಿಗೆ ಗಾಯಗಳಾಗಿವೆ.
ಕರ್ತವ್ಯ ಪ್ರಜ್ಞೆ ಮೆರೆದ ಡಿ.ವೈ.ಎಸ್.ಪಿ: ಶಿವಮೊಗ್ಗ ಉಪ ವಿಭಾಗದ ಡಿ.ವೈ.ಎಸ್. ಉಮೇಶ್ ನಾಯ್ಕ ಅವರು ಇದೇ ಮಾರ್ಗವಾಗಿ ಆಯನೂರಿಗೆ ಹೋಗುತ್ತಿದ್ದರು.‌ ತಕ್ಷಣ ವಾಹನ ನಿಲ್ಲಿಸಿ ಗಾಯಾಳುವನ್ನಹ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!