ಕೋವಿಡ್ ಮಧ್ಯೆಯೂ ಗೂಡ್ಸ್ ಆದಾಯದಲ್ಲಿ ಹೈಕ್!

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಕೋವಿಡ್ ಕರಿನೆರಳು ದೇಶದ ಎಲ್ಲ ಕ್ಷೇತ್ರಗಳ ಮೇಲೆ ಬೀರಿದೆ. ಆದರೆ, ಬೆಂಗಳೂರು ವಿಭಾಗದ ಸರಕುಗಳ ಆದಾಯದಲ್ಲಿ ಶೇ.15ರಷ್ಟು ಚೇತರಿಕೆ ಕಂಡಿದೆ.
ಲಾಕ್‌ ಡೌನ್ ವೇಳೆ ಎಲ್ಲ ಕ್ಷೇತ್ರಗಳು ಬಾಗಿಲು ಹಾಕಿದ್ದವು. ರೈಲು ಸೇವೆ ಸ್ಥಗಿತಗೊಳಿಸಿದ್ದರೂ ದೇಶದಲ್ಲಿ ಸರಬರಾಜು ಪ್ರಕ್ರಿಯೆಯನ್ನು ಸಕ್ರಿಯವಾಗಿಡಲು ಸರಕುಗಳು ಮತ್ತು ಪಾರ್ಸೆಲ್ ವಿಶೇಷಗಳನ್ನು ಓಡಿಸಬೇಕಾಗಿತ್ತು. ಇದರ ಫಲವಾಗಿ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ಸಲ ಆದಾಯದಲ್ಲಿ ಏರಿಕೆಯಾಗಿದೆ ಎಂದು ಬೆಂಗಳೂರು ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಮಾಹಿತಿ ನೀಡಿದರು.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ 65ನೇ ವಾರದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!