ಗಾಂಧಿ ಬಜಾರ್ ನಲ್ಲಿ ಅಗ್ನಿ ಅವಘಡಕ್ಕೆ ಕಾರಣ, ಆದ ನಷ್ಟದ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿ ಶನಿವಾರ ತಡ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎರಡು ಕಟ್ಟಡಗಳಿಗೆ ಹಾನಿÂಯಾಗಿದ್ದು, ಅಂದಾಜು 90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ.
ಗಾಂಧಿ ಬಜಾರ್‍ನಲ್ಲಿರುವ ಮಾತಾಶ್ರೀ ನಾವೆಲ್ಟಿ ಸೆಂಟರ್ ಅವರಿಗೆ ಸೇರಿದ ಜಿ+2 ಕಟ್ಟಡ (ಫ್ಯಾಂಸಿ ಡ್ರೆಸ್ ಬಟ್ಟೆ ಅಂಗಡಿ) ಹಾಗೂ ಜಿ+1 ಕಟ್ಟಡ (ಕಾಸ್ಮೆಟಿಕ್ಸ್ ಅಂಗಡಿ) ಅನುಮಾನಾಸ್ಪದವಾಗಿ ಬೆಂಕಿ ತಗುಲಿದೆ.

Gandhi Bazar fire lossರಾತ್ರಿ ನಡೆದಿದ್ದೇನು?

  1. ರಾತ್ರಿ 12ರ ಸುಮಾರಿಗೆ ಬೆಂಕಿ ಅನಾಹುತ
  2. ರಾತ್ರಿ 12 ಗಂಟೆ 25 ನಿಮಿಷಕ್ಕೆ ಅಗ್ನಿಶಾಮಕ ದಳಕ್ಕೆ ಕರೆ
  3. 12 ಗಂಟೆ 30 ನಿಮಿಷಕ್ಕೆ ಅನಾಹುತ ಸ್ಥಳಕ್ಕೆ ತಲುಪಿದ ಅಗ್ನಿ ಶಾಮಕ ದಳ
  4. ಭಾನುವಾರ ಬೆಳಗ್ಗೆಯವರೆಗೆ ಕಾರ್ಯಾಚರಣೆ

ಏನೇನು ನಷ್ಟ | ಮಳಿಗೆಯಲ್ಲಿದ್ದ ಕಾಸ್ಮೆಟಿಕ್ಸ್, ಜುವೆಲರಿ, ಫರ್ನಿಚರ್ಸ್, ಕಂಪ್ಯೂಟರ್ಸ್, ಪಾರ್ಲರ್ ಚೇರ್ಸ್, ಸಿಸಿ ಕ್ಯಾಮೆರಾ, ಮೆಷಿನರಿ, ಪ್ಯಾಂಸಿ ಡ್ರೆಸ್ ಬಟ್ಟೆಗಳು, ಇನ್ನಿತರ ವಸ್ತುಗಳ ಒಳಗೊಂಡಂತೆ ಅಂದಾಜು 1.50 ಕೋಟಿ ರೂಪಾಯಿ ಮೌಲ್ಯದ ವಸ್ತುಗಳಿದ್ದವು. ಅದರಲ್ಲಿ ಅಂದಾಜು 90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿ ಆಪೋಷನ ಮಾಡಿದೆ.

ಇದನ್ನೂ ಓದಿ । BREAKING NEWS | ಗಾಂಧಿ ಬಜಾರ್ ನಲ್ಲಿ ಭಾರಿ ಬೆಂಕಿ ಅನಾಹುತ, ಹೊತ್ತಿ ಉರಿದ ಕಟ್ಟಡ

ಅಗ್ನಿ ಹತೋಟಿಗೆ ಹೆಚ್ಚುವರಿ ಜಲವಾಹನ | ಎರಡು ಕಟ್ಟಡಗಳಿಗೆ ಬೆಂಕಿ ತಗುಲಿದ್ದು, ಅಗ್ನಿಯ ಕೆನ್ನಾಲಗೆ ವ್ಯಾಪಿಸಿತ್ತು. ಬೆಂಕಿ ಬೇರೆಡೆಗೆ ಚಾಚುವ ಸಂಭವ ಇದ್ದುದ್ದರಿಂದ ಶಿಕಾರಿಪುರ, ಭದ್ರಾವತಿ ಹಾಗೂ ತೀರ್ಥಹಳ್ಳಿಯ ಅಗ್ನಿಶಾಮಕ ಠಾಣೆಗಳಿಂದ ವಾಹನಗಳನ್ನು ಕರೆಸಿಕೊಳ್ಳಲಾಗಿತ್ತು. ನಂತರ ಬೆಂಕಿ ಹತೋಟಿಗೆ ಬಂದಿದೆ.

ಅಗ್ನಿಶಾಮಕ ದಳಕ್ಕೆ ಹ್ಯಾಟ್ಸ್ ಆಫ್ | ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳಾದ ಸಿ.ಎಚ್.ಹುಲಿಯಪ್ಪ, ಎಚ್.ಕೆ.ಕಬೀರ್ ದಾಸ್ ಕೆ.ಹಳದಪ್ಪ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಾಹನ | ಅಗ್ನಿ ನಂದಿಸುವ ಕಾರ್ಯದಲ್ಲಿ ಆರು ವಾಹನಗಳು ಪಾಲ್ಗೊಂಡಿದ್ದವು. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿಗೆ ಸೇರಿದ್ದ ನಾಲ್ಕು ಜಲವಾಹನ, ಒಂದು ಜೀಪ್, ವಾಟರ್ ಬೂಜರ್.

error: Content is protected !!