ಮಲವಗೊಪ್ಪದಲ್ಲಿ ಗಾಂಜಾ ಮಾರಾಟ, ವ್ಯಕ್ತಿ ಬಳಿ ಇದ್ದ ಗಾಂಜಾ ಎಷ್ಟು ಗೊತ್ತಾ?

 

 

ಸುದ್ದಿ ಕಣಜ. ಕಾಂ
ಶಿವಮೊಗ್ಗ: ಮಲವಗೊಪ್ಪ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ

ಸುನಿಲ್ ಅಲಿಯಾಸ್ ಬೆಕ್ಕು(26) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 300 ಗ್ರಾಂ. ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಮತ್ತು ಗಾಂಜಾ ಮಾರಾಟ ಮಾಡಿ ಸಂಪಾದಿಸಿದ 470 ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ | ಡಿವೈಎಸ್.ಪಿ ಪ್ರಶಾಂತ್ ಜಿ.ಮುನ್ನೋಳಿ, ತುಂಗಾನಗರ ಪೊಲೀಸ್ ಠಾಣೆ ಪಿ.ಐ ದೀಪಕ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ತಿರುಮಲೇಶ್ ನೇತೃತ್ವದ ಸಿಬ್ಬಂದಿ ಹೆಡ್ ಕಾನ್ಸ್ ಟೆಬಲ್ ಅರುಣ್ ಕುಮಾರ್, ಸೈಯದ್ ಇಮ್ರಾನ್ ಮತ್ತು ಲಂಕೇಶ್ ಅವರನ್ನು ಒಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಬಂಧಿಸಿದೆ.
ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಸುನೀಲ್ ಎಂಬಾತನಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

error: Content is protected !!