ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೋಮಿನಕೊಪ್ಪ ಸಮೀಪ ಮಂಗಳವಾರ ರಾತ್ರಿ ರೈಲಿಗೆ ಎಮ್ಮೆ ಸಿಲುಕಿದ್ದು, ಇಂಟರ್‍ಸಿಟಿ ರೈಲು ಎರಡು ಗಂಟೆ ವಿಳಂಬವಾಯಿತು. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ್ದಕ್ಕೆ ಪ್ರಯಾಣಿಕರು ಪರದಾಡಿದರು.
READ | ರಾಜ್ಯದಲ್ಲಿ ಮಂಗನ ಕಾಯಿಲೆ ಸ್ಫೋಟ, ಇಂದು ಎಲ್ಲಿ ಎಷ್ಟು ಜನರಿಗೆ ಸೋಕು?
ಬೆಂಗಳೂರು ತಾಳಗುಪ್ಪ ರೈಲಿಗೆ ಸಿಲುಕಿ ಎರಡು ಎಮ್ಮೆಗಳು ಮೃತಪಟ್ಟಿವೆ. ತಕ್ಷಣ ಲೋಕೊ ಪೈಲೆಟ್ ರೈಲನ್ನು ನಿಲ್ಲಿಸಿದ್ದಾರೆ. ರಾತ್ರಿ 10 ಗಂಟೆಗೆ ತಾಳಗುಪ್ಪಕ್ಕೆ ತಲುಪಬೇಕಿದ್ದ ರೈಲು 12 ಗಂಟೆಗೆ ವಿಳಂಬವಾಯಿತು. ರಾತ್ರಿ 12 ಗಂಟೆಯ ಹೊತ್ತಿಗೆ ರೈಲು ತಲುಪಿದೆ. ಇದರಿಂದಾಗಿ ತಾಳಗುಪ್ಪ- ಮೈಸೂರು ಎಕ್ಸ್ ಪ್ರೆಸ್ ರೈಲು 20 ನಿಮಿಷ ವಿಳಂಬವಾಯಿತು.