ಭದ್ರಾವತಿಯಲ್ಲಿ ಕೊರೊನಾ ಕೇಕೆ, ಜಿಲ್ಲೆಯಲ್ಲಿಂದು ದ್ವಿ ಶತಕ ಬಾರಿಸಿದ‌ ಸೋಂಕಿತರ ಸಂಖ್ಯೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಕೇಕೆ ಮುಂದುವರಿದಿದೆ. ಸೋಮವಾರವೊಂದೇ ದಿನ 93 ಜನರಿಗೆ ಸೋಂಕು‌ ತಗಲಿದ್ದು, ಜನರಲ್ಲಿ ಭೀತಿ ಸೃಷ್ಟಿಯಾಗಿದೆ.

READ |ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಬೆಡ್ ಕೋವಿಡ್ ಗೆ ಮೀಸಲು, ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್, ಕೋವಿಡ್ ಚಿಕಿತ್ಸೆಗೆ ಎಷ್ಟಿರಲಿದೆ ವೆಚ್ಚ?

ಜಿಲ್ಲೆಯಲ್ಲಿ‌ ಹತ್ತು ವಿದ್ಯಾರ್ಥಿಗಳು ಹಾಗೂ ಒಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ. ಒಟ್ಟು 219 ಜನರಲ್ಲಿ‌ ಸೋಂಕು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 897ಕ್ಕೆ ತಲುಪಿದೆ.
ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆದು ಗುಣಮುಖರಾದ 70 ಜನರನ್ನು ಬಿಡುಗಡೆಗೊಳಿಸಲಾಗಿದೆ. ಕೊರೊನಾ ಲಕ್ಷಣಗಳನ್ನು ಹೊಂದಿರುವ 2,951 ಜನರ ಮಾದರಿ ಸಂಗ್ರಹಿಸಿದ್ದು, 2,071 ವರದಿಗಳು ನೆಗೆಟಿವ್‌ ಬಂದಿವೆ.
ಹೋಮ್ ಐಸೋಲೇಷನ್ ನಲ್ಲಿ 558 ಜನ | ಕೋವಿಡ್‌ ವಾರ್ಡ್‌ನಲ್ಲಿ 223, ಖಾಸಗಿ ಆಸ್ಪತ್ರೆ 46, ಹೋಮ್‌ ಐಸೋಲೇಷನ್‌ 558, ಟ್ರಿಯೇಜ್‌ 52 ಸೋಂಕಿತರಿದ್ದಾರೆ.
ತಾಲೂಕುವಾರು ಪ್ರಕರಣ | ಶಿವಮೊಗ್ಗ 47, ಭದ್ರಾವತಿ 93, ಶಿಕಾರಿಪುರ 9, ತೀರ್ಥಹಳ್ಳಿ 2, ಸೊರಬ 16, ಸಾಗರ 22, ಹೊಸನಗರ 24, ಹೊರ ಜಿಲ್ಲೆಯ 6.

error: Content is protected !!