ಕೊರೊನಾಗೆ ಭದ್ರಾವತಿ ವ್ಯಕ್ತಿ ಬಲಿ, ಶಿವಮೊಗ್ಗದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ತನ್ನ‌ ಕರಿಛಾಯೆಯನ್ನು ಜಿಲ್ಲೆಯಾದ್ಯಂತ ಹರಡುತ್ತಿದೆ. ಗುರುವಾರ ಒಂದೇ ದಿನ 755 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ‌ 36 ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿ ಇದ್ದಾರೆ. 468 ಮಂದಿ ಗುಣಮುಖರಾಗಿದ್ದಾರೆ.
65 ವರ್ಷದ ಭದ್ರಾವತಿಯ ಪುರುಷ, 60 ವರ್ಷದ ಶಿವಮೊಗ್ಗದ ವ್ಯಕ್ತಿ ಹಾಗೂ ಸಾಗರದ 77 ವರ್ಷದ ವ್ಯಕ್ತಿಯು ಮೃತಪಟ್ಟಿದ್ದಾರೆ. ಇವರೆಲ್ಲರೂ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಸಂಖ್ಯೆಯು ಜಿಲ್ಲೆಯಲ್ಲಿ‌ 374ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣ | ಸಕ್ರಿಯ ಪ್ರಕರಣಗಳ‌ ಸಂಖ್ಯೆ 2,439ಕ್ಕೆ ಏರಿಕೆಯಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 398, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 16, ಖಾಸಗಿ ಆಸ್ಪತ್ರೆಯಲ್ಲಿ 305, ಹೋಮ್ ಐಸೋಲೇಷನ್‌ ನಲ್ಲಿ 1629, ಟ್ರಿಯೇಜ್‌ ನಲ್ಲಿ 91 ಜನರಿದ್ದಾರೆ. ಸಕ್ರಿಯ ಪ್ರಕರಣ ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ ತಾಲೂಕು ಸೇರಿದಂತೆ ಹಲವೆಡೆ ಕೊರೊನಾ ಸ್ಫೋಟವಾಗಿದೆ. ಶಿವಮೊಗ್ಗದಲ್ಲಿ 221, ಭದ್ರಾವತಿ 103, ಶಿಕಾರಿಪುರ 67, ತೀರ್ಥಹಳ್ಳಿ 108, ಸೊರಬ 87, ಸಾಗರ 117, ಹೊಸನಗರ 33, ಹೊರ ಜಿಲ್ಲೆಯ 19 ಜನರು ಸೋಂಕಿಗೆ ಗುರಿಯಾಗಿದ್ದಾರೆ.

https://www.suddikanaja.com/2021/04/26/honnali-person-dead-in-shivamogga-due-to-covid/

error: Content is protected !!