ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು

 

 

– ರವಿ
ಮೊನ್ನೆ ನಡೆದ ಘಟನೆ ಮತ್ತೊಮ್ಮೆ ತಂತ್ರಜ್ಞಾನ ಬಳಕೆಯಲ್ಲಿ ನಾವೆಷ್ಟು ಸಮರ್ಥರು ಎಂಬುವುದನ್ನು ಸಾಬೀತುಪಡಿಸಿದೆ.
ವಾಟ್ಸಾಪ್ ಅನ್ನು ತಿಳಿಗುಲಾಬಿ(ಪಿಂಕ್) ಬಣ್ಣಕ್ಕೆ ಬದಲಿಸುವ ಬಗ್ಗೆ ಬಂದ ಸಂದೇಶ ಕ್ಲಿಕ್ಕಿಸಿದ ಅದೆಷ್ಟೋ ಬಳಕೆದಾರರು ಪೇಚಿಗೆ ಸಿಲುಕಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಸದ್ದು ಮಾಡಿದೆ. ಆದರೆ, ಇದರ ಬೆನ್ನಲ್ಲೇ ತಂತ್ರಜ್ಞಾನದ ಬಗ್ಗೆ ನಮಗೆಷ್ಟು ಅರಿವಿನ ಕೊರತೆ ಇದೆ ಎಂಬ ಅಂಶ ಗೊತ್ತಾಗಿದೆ.

WhatsApp Image 2021 04 17 at 8.30.35 AMಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಅಪರಾಧವು ತನ್ನ ಚಹರೆಯನ್ನು ಬದಲಿಸುತ್ತಿದೆ. ಪ್ರತಿ ಸಲ ಎಟಿಎಂ ಆದಿಯಾಗಿ ಯಾವುದೇ ರೀತಿಯ ಆನ್ಲೈನ್ ಫ್ರಾಡ್ ನಡೆದಾಗಲೂ ‘ಮೋಸ’ಗಾರರನ್ನು ದೂರುವ ಪ್ರವೃತ್ತಿ ಇದೆ. ಆದರೆ, ಕೈ ಸೇರುವ ತಂತ್ರಜ್ಞಾನದ ಬಳಕೆ, ಸಾಧಕ, ಬಾಧಕಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದೂ ಇದಕ್ಕೆ ಕಾರಣ ಎಂಬ ಪ್ರಜ್ಞೆ ಕಡಿಮೆ.
ಈ ತಂತ್ರಜ್ಞಾನ ಅನಕ್ಷರತೆಯನ್ನೇ ಮೋಸಗಾರರು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಲೈಫ್ ಇನ್ಶೂರೆನ್ಸ್, ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ, ಮೊಬೈಲ್ ಗಳಿಗೆ ಲಿಂಕ್ ಕಳುಹಿಸಿ ಅದನ್ನು ಒತ್ತುವಂತೆ ಸೂಚಿಸುವುದು, ಒಟಿಪಿ, ಸೆಕ್ಸ್ ಟಾರ್ಷನ್ ಕೇಳಿ ಕರೆ ಮಾಡುವುದು ಹೀಗೆ ವಿವಿಧ ಬಗೆಯಲ್ಲಿ ಜನರನ್ನು ಮೋಸ ಮಾಡಲಾಗುತ್ತಿದೆ.

READ | ಟೀಂ ಇಂಡಿಯಾದ ನ್ಯೂ ಫ್ಯಾಬ್-4, ಕೆಳ ಕ್ರಮಾಂಕದ ಹುಡುಗರ ಆಟಕ್ಕೆ ಬೆಸ್ತು ಬಿದ್ದ ಎದುರಾಳಿಗಳು, ಇದು ಹೊಸ ತಲೆಮಾರಿನ ಕ್ರಿಕೆಟ್

ಬೀದಿ ಬದಿ ವ್ಯಾಪಾರಿಯ ಬಳಿ ಒಂದು ರೂಪಾಯಿಗೂ ಚೌಕಾಶಿ ಮಾಡುವ ಜನ ಜಗತ್ತಿನ ಯಾವುದೋ ಮೂಲೆಯಿಂದ ಬರುವ ಆಗುಂತಕ ಕರೆಯನ್ನು ನಂಬಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ಮಾನ ಕಳೆದುಕೊಂಡ ಉದಾಹರಣೆಗಳೂ ಇವೆ. ಇಷ್ಟಾದರೂ ಬಳಸುವ ತಂತ್ರಜ್ಞಾನದಲ್ಲಿ ಸಂರ್ಕೀಣ ಅಂಶಗಳನ್ನು ಅರಿತುಕೊಳ್ಳುವ, ಜ್ಞಾನ ವಿಸ್ತರಿಸುವ ಮನಸ್ಸು ಮಾಡುತ್ತಿಲ್ಲ. ಇದೇ ತಂತ್ರಜ್ಞಾನ ಅನಕ್ಷರತೆಯಿಂದಾಗಿ ಮೊನ್ನೆಯೂ ‘ಪಿಂಕ್ ವಾಟ್ಸಾಪ್’ ಅನ್ನು ನಂಬಿ ಜನ ಅದನ್ನು ಕ್ಲಿಕ್ಕಿಸಿದ್ದು.

ರಾಜ್ಯದಾದ್ಯಂತ ಲಕ್ಷಾಂತರ ಬಳಕೆದಾರರು ಈ ಸಂದೇಶವನ್ನು ಓದಲು ಕ್ಲಿಕ್ಕಿಸಿದ್ದೇ ಅದೆಷ್ಟೋ ಜನರಿಗೆ ತಾನಾಗಿಯೇ ಫಾರ್ವರ್ಡ್ ಕೂಡ ಆಗಿದೆ. ಬಳಿಕ ಕೈಕೈ ಹಿಸುಕಿಕೊಂಡು ಅದೆಷ್ಟೋ ಜನ ಸುಮ್ಮನಾಗಿದ್ದಾರೆ.
ವಾಟ್ಸಾಪ್ ಗೆ ಯಾರೋ ಕಳುಹಿಸುವ ಲಿಂಕ್ ಅನ್ನು ಹಿಂದೆ ಮುಂದೆ ಯೋಚಿಸದೇ ಫಾರ್ವರ್ಡ್ ಮಾಡುವ ಹಾಗೂ ಕ್ಲಿಕ್ಕಿಸಿ ಓದುವವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಪಿಂಕ್ ವಾಟ್ಸಾಪ್ ನಲ್ಲಿಯ ಮಾಲ್ ವೇರ್ ಗಳು ಅಥವಾ ಸರಳ ಭಾಷೆಯಲ್ಲಿ ಹೇಳುವುದಾದರೆ ವೈರಸ್ ಗಳು ನಮ್ಮ ಮೊಬೈಲ್ ನಲ್ಲಿಯ ಖಾಸಗಿ ಅಂಶಗಳನ್ನು ಪರಿಚಯವೇ ಇಲ್ಲದವರಿಗೆ ಶೇರ್ ಮಾಡಲು ಬಳಸಲಾಗುತ್ತದೆ ಎಂಬುವುದು ಅದೆಷ್ಟೋ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೊತ್ತಿಲ್ಲ.
ಈ ಅಂಶಗಳು ಗಮನದಲ್ಲಿರಲಿ

  1. ವಾಟ್ಸಾಪ್ ಅಥವಾ ಇಮೇಲ್ ನಲ್ಲಿ ಬರುವ ಲಿಂಕ್ ಒತ್ತುವ ಮುನ್ನ ನೂರು ಸಲ ಯೋಚಿಸಬೇಕು. ಒಂದುವೇಳೆ, ವಾಟ್ಸಾಪ್ ತನ್ನ ಬಣ್ಣ ಬದಲಿಸಬೇಕಿದ್ದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುತಿತ್ತು. ಹಾಗೂ ಪ್ರತಿಷ್ಠಿತ ಕಂಪೆನಿಗಳಾವವು ಈ ರೀತಿಯಲ್ಲಿ ಆಪ್ (ತಂತ್ರಾಂಶ) ಇನ್ಟಾಲ್ ಮಾಡಿಕೊಳ್ಳುವ ಬಗ್ಗೆ ಲಿಂಕ್ ಕಳುಹಿಸುವುದಿಲ್ಲ ಎಂಬ ಕನಿಷ್ಠ ಪ್ರಜ್ಞೆಯಾದರೂ ಇರಲೇಬೇಕು.
  2. ಯಾವುದೇ ಅಪ್ಲಿಕೇಶನ್ ಅನ್ನು ಲಿಂಕ್ ಮೂಲಕ ಇನ್ಸ್ಟಾಲ್ ಮೂಲಕ ಮಾಡದೇ ಗೂಗಲ್ ಪ್ಲೇಸ್ಟೋರ್ ಅಥವಾ ಅಧಿಕೃತ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಬೇಕು.
  3. ಇನ್ಸ್ಟಾಲ್ ಮಾಡಲು ಉದ್ದೇಶಿಸಿರುವ ಅಪ್ಲಿಕೇಶನ್ ನನಗೆ ಪ್ರಯೋಜನಕಾರಿಯೇ, ಅಗತ್ಯವಿದೆಯೇ ಎಂಬುವುದನ್ನು ಒಮ್ಮೆ ಯೋಚಿಸಬೇಕು.
  4. ಮೋಸ ಮಾಡುವುದಕ್ಕಾಗಿಯೇ ಬರುವ ಫಿಶಿಂಗ್ ಮೇಲ್, ಸಂದೇಶಗಳ ಬಗ್ಗೆ ಎಚ್ಚರವಿರಬೇಕು. ಆನ್ಲೈನ್ ವ್ಯವಹಾರದ ವೇಳೆ ಡೊಮೈನ್ ನೇಮ್ ಸರಿಯಾಗಿ ಪರಿಶೀಲಿಸಬೇಕು. ಪ್ರತಿಷ್ಠಿತ ಸಂಸ್ಥೆಯ ಲೋಗೊ, ಹೆಸರುಗಳನ್ನು ಬಳಸಿಯೂ ಮೋಸ ಮಾಡುವ ಸಾಧ್ಯತೆ ಇರುತ್ತದೆ..

https://www.suddikanaja.com/2021/02/13/solution-to-internet-problems-set-up-broadband-committee/

error: Content is protected !!