CORONA UPDATE | ಶಿವಮೊಗ್ಗ, ಭದ್ರಾವತಿಯಲ್ಲಿ ಡಬಲ್, ಸಾಗರದಲ್ಲಿ ಸಿಂಗಲ್ ಸೆಂಚ್ಯೂರಿ, ಮುಂದುವರಿದ ಸಾವು

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಸಾಗರದಲ್ಲೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇನ್ನುಳಿದ ಕಡೆಗಳಲ್ಲಿ ಪಾಸಿಟಿವ್ ಸಂಖ್ಯೆ ಎರಡಂಕಿ ಇದೆ.

READ | ಗಾಂಧಿ ಬಜಾರ್ ನಲ್ಲಿ ವಾಹನಗಳನ್ನು ಪುಡಿ ಮಾಡಿದ್ದ ಆರೋಪಿಗಳು ಅರೆಸ್ಟ್, ಘಟನೆಯಲ್ಲಿ ಎಷ್ಟು ವಾಹನಗಳು ಜಖಂ ಆಗಿವೆ ಗೊತ್ತಾ?

ಶಿವಮೊಗ್ಗ ತಾಲೂಕಿನಲ್ಲಿ 221, ಭದ್ರಾವತಿ 207, ತೀರ್ಥಹಳ್ಳಿ 64, ಶಿಕಾರಿಪುರ 49, ಸಾಗರ 143, ಹೊಸನಗರ 75, ಸೊರಬ 91, ಬಾಹ್ಯ ಜಿಲ್ಲೆಯ 31 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೊರೊನಾ ಇಂದು 17 ಜನರನ್ನು ಬಲಿ ಪಡೆದಿದೆ. 881 ಜನರಲ್ಲಿ ಕೊರೊನಾ ಸಂಕು ಪತ್ತೆಯಾಗಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು, 11 ಕಾಲೇಜು ಸಿಬ್ಬಂದಿ ಇದ್ದಾರೆ. 922 ಜನ ಗುಣಮುಖರಾಗಿದ್ದಾರೆ.
ಆ್ಯಕ್ಟಿವ್ ಕೇಸ್ ಏರಿಕೆ | ಪ್ರಸ್ತುತ 6,841 ಸಕ್ರಿಯ ಪ್ರಕರಣಗಳಿದ್ದು, ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಮೆಗ್ಗಾನ್ ನಲ್ಲಿ 613, ಡಿಸಿಎಚ್‌ಸಿನಲ್ಲಿ 237, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 559, ಖಾಸಗಿಯಲ್ಲಿ 656, ಹೋಮ್ ಐಸೋಲೇಷನ್‌ನಲ್ಲಿ 3,960, ಟ್ರಿಯೇಜ್‌ನಲ್ಲಿ 816 ಮಂದಿ ಸೋಂಕಿತರಿದ್ದಾರೆ.

https://www.suddikanaja.com/2021/05/17/covid-positive-case/

error: Content is protected !!