84 ಆಟೋ ಸೇರಿ 165 ವಾಹನ ಸೀಜ್, ಲಕ್ಷಾಂತರ‌ ದಂಡ‌

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 165 ವಾಹನಗಳನ್ನು‌ಸೀಜ್ ಮಾಡಲಾಗಿದೆ. ಅದರಲ್ಲಿ 77 ದ್ವಿ ಚಕ್ರ ವಾಹನ, 84 ಆಟೋಗಳು ಮತ್ತು 4 ಕಾರು ಸೇರಿ ಸೇರಿವೆ. 231 ಪ್ರಕರಣ ದಾಖಲಿಸಿ 1,08,600 ರೂಪಾಯಿ ದಂಡ ವಿಧಿಸಲಾಗಿದೆ.

READ | ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ ತಾಲೂಕಿನಲ್ಲಿ‌ ಎಷ್ಟು ಮರಣ

ಏಳು‌ ಅಂಗಡಿಗಳ ಮೇಲೆ‌ ಕೇಸ್ | ಜಿಲ್ಲೆಯಾದ್ಯಂತ ನಿಯಮ ಉಲ್ಲಂಘಿಸಿರುವ ಅಂಗಡಿ‌ ಮಾಲೀಕರ ವಿರುದ್ಧ ವಿವಿಧ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿವೆ. ದೊಡ್ಡಪೇಟೆ ಠಾಣೆಯಲ್ಲಿ 2, ತುಂಗನಗರ ಠಾಣೆಯಲ್ಲಿ 1, ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ 1, ಸಾಗರ ಟೌನ್‌ ಠಾಣೆಯಲ್ಲಿ 3 ಪ್ರಕರಣ ದಾಖಲಿಸಲಾಗಿದೆ.

error: Content is protected !!