
ಸುದ್ದಿ ಕಣಜ.ಕಾಂ | NATIONAL | SPECIAL STORY
Today world wide web day: ಇಂದು ಇಂಟರ್ನೆಟೇ ಇರಲಿಲ್ಲ ಎಂದಿದ್ದರೆ ಜಗತ್ತು ಹೇಗಿರುತಿತ್ತು? ಒಮ್ಮೆ ಯೋಚಿಸಿ…
ಬಹುತೇಕರ ದಿನ ಆರಂಭವಾಗುವುದೇ ಅಂತರ್ಜಾಲದೊಂದಿಗೆ, ಪ್ರತಿ ಅನುಮಾನಕ್ಕೂ ಉತ್ತರವೇ ಗೂಗಲ್. ಊಟ ತಿಂಡಿ, ಆರೋಗ್ಯ, ಮಾಹಿತಿ ಆದಿಯಾಗಿ ಪ್ರತಿಯೊಂದಕ್ಕೂ ಅಂತರ್ಜಾಲ ಬೇಕೇಬೇಕು. ಇದು ಜೀವನದಲ್ಲಿ ಅಷ್ಟೊಂದು ಹಾಸು ಹೊಕ್ಕಾಗಿದೆ. ಆದರೆ, ಇದೆಲ್ಲದಕ್ಕೂ ಮೂಲ ಇರುವುದೇ ವರ್ಲ್ಡ್ ವೈಡ್ ವೆಬ್( worldwideweb-WWW). ಅಂತರ್ಜಾಲದಲ್ಲಿ ಏನನ್ನಾದರೂ ಹುಡುಕಿ ಅದಕ್ಕೆ ಮೂಲ ಆಧಾರ ಈ www. ಆಗಸ್ಟ್ 1 ಅನ್ನು ಜಾಗತಿಕ ಮಟ್ಟದಲ್ಲಿ ‘ವರ್ಲ್ಡ್ ವೈಡ್ ವೆಬ್’ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬನ್ನಿ ಇದರ ಇತಿಹಾಸ, ಆವಿಷ್ಕಾರ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳೋಣ.
READ | ಸಿಟಿ ಬಸ್ ಮಾಲೀಕನ ದೂರಿಗೆ ಜೈ ಎಂದ ಗ್ರಾಹಕ ನ್ಯಾಯಾಲಯ, ಕ್ಲೇಮು ನೀಡಲು ತಾಕೀತು
ವರ್ಲ್ಡ್ ವೈಡ್ ವೆಬ್ ಇತಿಹಾಸ
ಕಂಪ್ಯೂಟರ್ ಜನಕ ಚಾರ್ಲ್ಸ್ ಬ್ಯಾಬೇಜ್ ಎಂದು ಚಿಕ್ಕ ಮಕ್ಕಳಿಗೂ ಗೊತ್ತು. ಆದರೆ, ಜಗತ್ತಿನಾದ್ಯಂತ ಇಂಟರ್ನೆಟ್ ಬಳಕೆಗೆ ಅತ್ಯಗತ್ಯ ಸಾಧನವಾದ WWW ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.
ಕಂಪ್ಯೂಟರ್ ವಿಜ್ಞಾನಿ ಟಿಮ್ ಬರ್ನರ್ಸ್ ಲೀ ಅವರು 1989 ರಲ್ಲಿ ಸ್ವಿಡ್ಜರ್ಲೆಂಡ್ ನ ಜಿನಿವಾ ಸಮೀಪದ ಸಿಎಆರ್.ಎನ್ (CERN) ನಲ್ಲಿ ಕೆಲಸ ಮಾಡುವಾಗ ವರ್ಲ್ಡ್ ವೈಡ್ ವೆಬ್ ಅನ್ನು ಕಂಡುಹಿಡಿದರು. 1990 ರಲ್ಲಿ, ಅವರು ವೆಬ್ಗೆ ಅಡಿಪಾಯವನ್ನು ಅಭಿವೃದ್ಧಿಪಡಿಸಿದರು. HTTP , HTML , ವರ್ಲ್ಡ್ವೈಡ್ವೆಬ್ ಬ್ರೌಸರ್, ಸರ್ವರ್ ಮತ್ತು ದಾಖಲಾತಿಗಳನ್ನು ನಿರ್ವಹಿಸುವ ಸಲುವಾಗಿ ಮೊದಲ ವೆಬ್ಸೈಟ್ ಬ್ರೌಸರ್ ಅನ್ನು CERN ನ ಹೊರಗೆ ಇತರ ಸಂಶೋಧನಾ ಸಂಸ್ಥೆಗಳಿಗೆ ಜನವರಿ 1991 ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಆಗಸ್ಟ್ 1991 ರಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಯಿತು. ಈ ಮೂಲಕ ಜಗತ್ತಿನಾದ್ಯಂತ ಇಂಟರ್ನೆಟ್ ಬಳಕೆಗೆ WWW ಅತ್ಯಗತ್ಯವಾದ ಸಾಧನವಾಗಿ ರೂಪುಗೊಂಡಿತು. ಜನರ ನಡುವಿನ ಸಂಪರ್ಕ–ಸಂಭಾಷಣೆಗೆ ಮೂಲ ವೇದಿಕೆಯಾಯಿತು. ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್(ಯುಆರ್ಎಲ್)ಗಳ ಸೃಷ್ಟಿಗೆ WWW ಆಧಾರವಾಯಿತು. ಯಾವುದೇ ದಾಖಲೆಗಳು, ಮಾಹಿತಿಗಳನ್ನು ಅಂತರ್ಜಾಲ ಸಂಪರ್ಕ ಬಳಸಿ ಹುಡುಕಲು WWW ಬೆನ್ನೆಲುಬಿನಂತಾಯಿತು.
ವಿಶ್ವದ ಮೊಟ್ಟಮೊದಲ ವೆಬ್ ಸರ್ವರ್ನ ರೂಪದಲ್ಲಷ್ಟೇ ಅಲ್ಲದೇ, 1990ರಲ್ಲಿ ಮೊಟ್ಟಮೊದಲ ವೆಬ್ ಬ್ರೌಸರ್ ಆದ WorldWideWeb ಅನ್ನು ಬರೆಯಲೂ ಸಹ ಒಂದು NeXT ಕಂಪ್ಯೂಟರ್ ಅನ್ನು ಬರ್ನರ್ಸ್-ಲೀ ಬಳಸಿದರು. ಇವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದವರು ಬೆಲ್ಜಿಯಂನ ಕಂಪ್ಯೂಟರ್ ವಿಜ್ಞಾನಿ ರಾಬರ್ಟ್ ಕೈಲಿಯು. ಇವರು WWW ಲೋಗೋ ಕೂಡ ವಿನ್ಯಾಸಗೊಳಿಸಿದವರು ಎಂಬುವುದು ವಿಶೇಷ.
ಪ್ರಸ್ತುತ ವರ್ಲ್ಡ್ ವೈಡ್ ವೆಬ್ನ್ನು (W3) ಮಾನವ ಜ್ಞಾನದ ಭಂಡಾರವಾಗಿ ಬಳಕೆಯಾಗುತ್ತಿದೆ. ನಮ್ಮ ಪರಿಕಲ್ಪನೆಗಳಿಗೆ ಮೂರ್ತಸ್ವರೂಪ ನೀಡುವ ಕೆಲಸವನ್ನು ಮಾಡುತ್ತಿದೆ.
- 2001ರ ಒಂದು ಅಧ್ಯಯನದ ಪ್ರಕಾರ, ವೆಬ್ ಮಾಧ್ಯಮದಲ್ಲಿ 550 ಶತಕೋಟಿಗಿಂತಲೂ ಹೆಚ್ಚಿನ ದಸ್ತಾವೇಜು (Documents)ಗಳಿದ್ದವು.
- 2,024 ದಶಲಕ್ಷದಷ್ಟು ವೆಬ್ ಪುಟಗಳಿಗೆ ಸಂಬಂಧಿಸಿ 2002ರಲ್ಲಿ ಕೈಗೊಳ್ಳಲಾದ ಒಂದು ಸಮೀಕ್ಷೆ ಪ್ರಕಾರ, ಇದುವರೆಗಿನ ಬಹುಪಾಲು ವೆಬ್ ವಸ್ತು ವಿಷಯವು ಇಂಗ್ಲಿಷ್ನಲ್ಲಿದ್ದು ಅದರ ಪಾಲು ಶೇ.56.4ರಷ್ಟಿದೆ. ನಂತರದ ಸ್ಥಾನಗಳು ಜರ್ಮನ್ (ಶೇ.7.7), ಫ್ರೆಂಚ್ (ಶೇ.5.6), ಮತ್ತು ಜಪಾನಿ ಭಾಷೆಯಲ್ಲಿ ಶೇ.4.9 ಪುಟಗಳು ಸೇರಿವೆ.
- 2005ರ ಜನವರಿ ಅಂತ್ಯದ ವೇಳೆಗೆ ವೆಬ್ನಲ್ಲಿ 11.5 ಶತಕೋಟಿಗೂ ಹಾಗೂ 2009ರ ವರೆಗೆ 25.21 ಶತಕೋಟಿಯಷ್ಟು ವೆಬ್ ಪುಟಗಳಿವೆ.
- ಗೂಗಲ್ ಕೈಗೊಂಡ ಶೋಧಕಾರ್ಯದ ಪ್ರಕಾರ,
2009ರ ವೇಳೆಗೆ 109.5 ದಶಲಕ್ಷಕ್ಕೂ ಹೆಚ್ಚಿನ ವೆಬ್ಸೈಟ್ಗಳಲ್ಲಿ ಒಂದು ಲಕ್ಷ ಕೋಟಿಯಷ್ಟು ವಿಶಿಷ್ಟವಾದ URLಗಳನ್ನು ಪತ್ತೆಯಾಗಿವೆ. ಇವುಗಳ ಪೈಕಿ ಶೇ.74ರಷ್ಟು ವಾಣಿಜ್ಯೋದ್ದೇಶದ ಅಥವಾ ಇತರ ವೆಬ್ಸೈಟ್ಗಳಾಗಿವೆ.
READ | ಮತದಾರರ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡುವುದು ಹೇಗೆ, ಪ್ರಯೋಜನಗಳೇನು?
W3ಗೂ ಇದೆ ಒಂದು ಅಡ್ಡ ಹೆಸರು!
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಗಳು ಟ್ರೋಲ್ (Troll) ಆಗುತ್ತಲೇ ಇರುತ್ತವೆ. ಸೆಲೆಬ್ರಿಟಿಯೋ ಅಥವಾ ಪ್ರಮುಖ ವ್ಯಕ್ತಿ, ವಸ್ತುಗಳ ಬಗ್ಗೆ ಕಾಲೆಳೆಯುವ ಪ್ರಯತ್ನ ನಡೆಯುತ್ತಲೇ ಇರುತ್ತವೆ. ಇದು ‘ವರ್ಲ್ಡ್ ವೈಡ್ ವೆಬ್’ಗೂ ಬಿಟ್ಟಿಲ್ಲ ಎನ್ನುವುದೇ ವಿಶಿಷ್ಟ.
ಆರಂಭದಲ್ಲಿದ್ದ ತಡೆಗಳಿಂದಾಗಿ WWW ಸ್ವಲ್ಪ ನಿಧಾನಗತಿಯಲ್ಲಿತ್ತು. ಹೀಗಾಗಿ ಇದನ್ನುWorld Wide Wait ಎಂಬ ಪರ್ಯಾಯ ಹೆಸರಿನಲ್ಲಿ ಕರೆಯಲಾಯಿತು. ನಂತರ ದಿನಮಾನಗಳಲ್ಲಿ World Wide Waitನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಇತರ ಪರಿಹಾರೋಪಾಯಗಳನ್ನು W3Cಯಲ್ಲಿ ಕಂಡುಕೊಳ್ಳಲಾಯಿತು.