ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾನುವಾರ ಹೊಸದಾಗಿ 11 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಜನ ಮೃತಪಟ್ಟಿದ್ದಾರೆ. 11 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಜೈಲಿನಲ್ಲಿ ನಡೀತು ಕಿರಿಕ್, ಮೂವರಿಗೆ ಗಾಯ, ಕಾರಣವೇನು ಗೊತ್ತಾ?
ತಾಲೂಕುವಾರು ವರದಿ: ಶಿವಮೊಗ್ಗದಲ್ಲಿ 5, ಭದ್ರಾವತಿ 2, ಶಿಕಾರಿಪುರ 1, ತೀರ್ಥಹಳ್ಳಿ 0, ಸೊರಬ 1, ಸಾಗರ 0, ಹೊಸನಗರ 0 ಹಾಗೂ ಬೇರೆಯ ಜಿಲ್ಲೆಯ ಎರಡು ಪ್ರಕರಣಗಳು ಪತ್ತೆಯಾಗಿವೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 22 ಜನ ಚಿಕಿತ್ಸೆ ಪಡೆಯುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ 6 ಮತ್ತು ಹೋಂ ಐಸೋಲೇಷನ್ ನಲ್ಲಿ 72 ಜನರಿದ್ದಾರೆ. ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ 100 ಇವೆ.
ಭಾನುವಾರದಂದು 258 ಜನರಿಂದ ಗಂಟಲು ದ್ರವದ ಮಾದರಿ ಪರೀಕ್ಷೆಗೋಸ್ಕರ ಸಂಗ್ರಹಿಸಿದ್ದು, 994 ನೆಗೆಟಿವ್ ಬಂದಿವೆ.